ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ (BJP Scam) ಬಗ್ಗೆ ಚರ್ಚೆ ನಡೆದಿದೆ.
ಕೋವಿಡ್ (Covid) ಮಧ್ಯಂತರ ವರದಿ ಬಗ್ಗೆ ಸಿದ್ದರಾಮಯ್ಯ ಅವರೇ ಪ್ರಸ್ತಾಪಿಸಿದ್ದು ಗಂಭೀರ ಚರ್ಚೆಯಾಗಿದೆ. ವರದಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿ ಎಚ್.ಕೆ.ಪಾಟೀಲ್ (HK Patil) ಮಾತನಾಡಿ, ಕೆಲವು ಫೈಲ್ ಮಿಸ್ ಆಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪ ಆಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೊಟ್ಟ ವಿವರ ಸಹ ವರದಿಯಲ್ಲಿ ಬಂದಿದೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳು ಈ ವರದಿ ಬಗ್ಗೆ ತಿಂಗಳ ಒಳಗಾಗಿ ವಿವರ ಕೊಡುತ್ತಾರೆ. ವಿವರವಾದ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮಹದಾಯಿ ಯೋಜನೆಗೆ (Mahadayi Project) ಅನುಮತಿಗೆ ವನ್ಯಜೀವಿಮಂಡಳಿ ಅನುಮೋದನೆ ನೀಡಿಲ್ಲ. ಆದರೆ ಗೋವಾದ ವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿದೆ. ಈ ವಿಚಾರವನ್ನು ನಾವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸರ್ವಪಕ್ಷ ಸಭೆ ನಡೆಸಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಅರ್ಧ ಕೆಜಿ ತೊಗರಿ, ಎಣ್ಣೆ, ಸಕ್ಕರೆ ಕೊಡುವ ಫುಡ್‌ಕಿಟ್ ಪ್ರಸ್ತಾವನೆ ಕೈಬಿಟ್ಟಿದ್ದು, ಯಥಾಸ್ಥಿತಿ ಮುಂದುವರಿಯಲಿದೆ. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಭೆ ನಡೆಸಿ ನ್ಯಾಯಾಂಗ ಉಲ್ಲಂಘನೆ ಮಾಡಿಲ್ಲ ಅಂತ ಎಚ್.ಕೆ ಪಾಟೀಲ್ ವಿವರಿಸಿದರು.