Monday, 16th July 2018

Recent News

ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎಂದ ಬಿಜೆಪಿ ಕಾರ್ಪೋರೇಟರ್ ಗಳು

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಮ್ಮ ವಾರ್ಡ್ ನಲ್ಲಿ ಸ್ಥಳವಿಲ್ಲ ಎಂದು ಬಿಜೆಪಿ ಕಾರ್ಪೋರೇಟರ್ ಗಳು ಬಡವರ ಊಟಕ್ಕೆ ಕಲ್ಲು ಹಾಕ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಐದು ರೂಪಾಯಿಯಲ್ಲಿ ಬಡವರ ಹೊಟ್ಟೆ ತುಂಬಿಸೋ ಇಂದಿರಾ ಕ್ಯಾಂಟೀನ್ ಬೇಡ ಅಂತಾ ಅನ್ನುತ್ತಿದ್ದಾರೆ.

ಬೆಂಗಳೂರಿನ ಪ್ರತಿ ವಾರ್ಡ್ ನಲ್ಲೂ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಬೇಕು ಅನ್ನೋದು ಸರ್ಕಾರದ ಆದೇಶ. ಆದರೆ 24 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳಾವಕಾಶ ಲಭ್ಯವಾಗಿಲ್ಲ. ಅಶ್ಚರ್ಯ ಅಂದ್ರೆ 24 ರಲ್ಲಿ 16 ವಾರ್ಡ್‍ಗಳು ಬಿಜೆಪಿ ಕಾರ್ಪೋರೇಟರ್ ಗಳಿರೋ ವಾರ್ಡ್ ಗಳು. ಇಂದಿರಾ ಕ್ಯಾಂಟೀನ್‍ಗೆ ಸ್ಥಳಾವಕಾಶ ಮಾಡಿಕೊಡುವ ವಿಚಾರವಾಗಿ ರಾಜಕೀಯ ನಡೆಯುತ್ತಿದಿಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ನಮ್ಮ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಬೇಡಾ ಎಂದು ಹೇಳುತ್ತಿರುವ ಕೆಲ ಬಿಜೆಪಿ ಕಾರ್ಪೋರೇಟರ್ ಗಳು ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎನ್ನುತ್ತಿದ್ದಾರೆ. ಬಿಬಿಎಂಪಿ ಪೂರ್ವ ವಲಯದ ಕಾಚಕರನಹಳ್ಳಿ, ಮನೋರಾಯನ ಪಾಳ್ಯ, ಹಲಸೂರು ವಾರ್ಡ್, ಪಶ್ಚಿಮ ವಲಯದ ಕಾಡುಮಲ್ಲೇಶ್ವರ, ದಕ್ಷಿಣ ವಲಯ ಕೆಂಪಾಪುರ, ಶ್ರೀನಗರ, ಗಿರಿನಗರ – 162 , ಗಣೇಶಮಂದಿರ – 165 ಯಡಿಯೂರು, ಜಯನಗರ ಪೂರ್ವ, ಹಾಗೂ ಬೊಮ್ಮನಹಳ್ಳಿ ವಲಯದ ಯಲೆಚೇನ ಹಳ್ಳಿ ಸೇರಿದಂತೆ ಬಿಜೆಪಿ ಕಾಪೊರ್ರೇಟರ್ ಗಳಿರೋ 13 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎಂದು ಹೇಳಲಾಗಿದೆ.

ಬಿಜೆಪಿ ಕಾರ್ಪೋರೇಟರ್ ಗಳಿರೋ ಕೆಲವೊಂದು ವಾರ್ಡ್ ಗಳ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಳವಾಕಾಶವಾಗದೆ ಇರೋದ್ರಿಂದ ಪಕ್ಕದ ವಾರ್ಡ್ ಗಳಲ್ಲಿ ನಿರ್ಮಿಸಲಾಗಿದೆ.

ಯಾವ ಯಾವ ವಾರ್ಡ್ ಗಳಲ್ಲಿ ಕ್ಯಾಂಟೀನ್ ಇಲ್ಲ:

1. ಮಹದೇವ ಪುರ ವಲಯದ ಹೆಚ್‍ಎಎಲ್ ವಿಮಾನ ನಿಲ್ದಾಣ ವಾರ್ಡ್
2. ಬಿಬಿಎಂಪಿ ಪೂರ್ವ ವಲಯದ ಕಾಚಕರನಹಳ್ಳಿ -ಬಿಜೆಪಿ
* ಮನೋರಾಯನ ಪಾಳ್ಯ -33 -ಬಿಜೆಪಿ
* ಹಲಸೂರು – 90 -ಬಿಜೆಪಿ

3. ಪಶ್ಚಿಮ ವಲಯದ ಕಾಡುಮಲ್ಲೇಶ್ವರ- ಬಿಜೆಪಿ
* ಓಕಳಿ ಪುರಂ – 96
* ದಯಾನಂದ ನಗರ -97
* ಶಿವಾಜಿ ನಗರ -92
* ಶ್ರೀ ರಾಮಮಂದಿರಾ – ಬಿಜೆಪಿ

3. ರಾಜರಾಜೇಶ್ವರಿ ವಲಯ
* ಲಕ್ಷ್ಮಿದೇವಿ ನಗರ – 42
* ಲಗ್ಗೆರೆ – ಜೆಡಿಎಸ್
* ಜ್ಞಾನ ಭಾರತಿ -ಬಿಜೆಪಿ

4. ದಕ್ಷಿಣ ವಲಯ
ಕೆಂಪಾಪುರ -122
ಬಾಪೂಜೀನಗರ – 134
ಹೊಂಬೆಗೌಡ ನಗರ
ಶ್ರೀನಗರ – 156 – ಬಿಜೆಪಿ
ಗಿರಿನಗರ – 162-ಬಿಜೆಪಿ
ಗಣೇಶಮಂದಿರ -165 -ಬಿಜೆಪಿ
ಯಡಿಯೂರು – ಬಿಜೆಪಿ
ಜಯನಗರ ಪೂರ್ವ -153 – ಬಿಜೆಪಿ
ಮಡಿವಾಳ
ಜೆಪಿ ನಗರ -177- ಬಿಜೆಪಿ

5. ಬೊಮ್ಮನಹಳ್ಳಿ
ಯಲೆಚೇನ ಹಳ್ಳಿ -185- ಬಿಜೆಪಿ
* ಯಲಹಂಕ
ಥಣಿಸಂದ್ರ – 6

 

Leave a Reply

Your email address will not be published. Required fields are marked *