-ಇಬ್ಬರ ಗಲಾಟೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಫುಲ್ ಸ್ಟಾಪ್
ಬೆಂಗಳೂರು: ಬಿಜೆಪಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಎಂಎಲ್‍ಎ ಗಲಾಟೆಗೆ ಅಭಿವೃದ್ಧಿ ಕೆಲಸಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ವಿಜಯನಗರ ಹೊಸಹಳ್ಳಿ ಕಾರ್ಪೋರೇಟರ್ ಮಹಾಲಕ್ಷ್ಮಿ ಮತ್ತು ಕಾಂಗ್ರೆಸ್ ಶಾಸಕ ಕೃಷ್ಣಪ್ಪರ ಬೆಂಬಲಿಗರ ನಡುವೆ ಶೀತಲ ಸಮರ ಆರಂಭವಾಗಿದೆ.
ಕಾರ್ಪೋರೇಟರ್ ಮಹಾಲಕ್ಷ್ಮಿ ಶನಿವಾರ ವಾರ್ಡ್ ಕಚೇರಿ ಮತ್ತು ಬೆಂಗಳೂರು ಒನ್ ಕಚೇರಿ ತೆರೆಯೋದಕ್ಕೆ ಹೊಸಹಳ್ಳಿ ಗ್ರೌಂಡ್‍ನಲ್ಲಿ ಗುದ್ದಲಿ ಪೂಜೆ ನಡೆಸಿದರು. ಆದರೆ ಕಾಮಗಾರಿ ನಡೆಯದಂತೆ ಶಾಸಕ ಕೃಷ್ಣಪ್ಪ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಆವರಣದಲ್ಲಿ ಮೊದಲು ರಂಗಮಂದಿರವಿತ್ತು. ಅದನ್ನು ಅನೇಕ ವರ್ಷಗಳ ಹಿಂದೆ ಕೆಡವಲಾಗಿದೆ. ಅದನ್ನು ಕಟ್ಟಿ, ವಾರ್ಡ್ ಕಚೇರಿ ಈಗಾಗಲೇ ಒಂದಿದೆ ಅನ್ನೋದು ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಬೆಂಬಲಿಗರ ವಾದ. ಕೃಷ್ಣಪ್ಪ ಬೆಂಬಲಿಗರ ವರ್ತನೆಗೆ ವಿರೋಧ ವ್ಯಕ್ತಪಡಿಸಿದ ಮಹಾಲಕ್ಷ್ಮಿ ತಮ್ಮ ತಂದೆ ರವೀಂದ್ರ ಜೊತೆಗೂಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೃಷ್ಣಪ್ಪ ಬೆಂಬಲಿಗರು ಹಾಗೂ ಕಾರ್ಪೋರೇಟರ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.
Advertisement
ಹೊಸಹಳ್ಳಿ ವಾರ್ಡ್ ನಿಂದ ಕಾರ್ಪೋರೇಟರ್ ಅಂತಾ ಆಯ್ಕೆಯಾಗಿ ಮೂರು ವರ್ಷಗಳಾಗಿದೆ. ನನ್ನ ವಾರ್ಡ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಸದಂತೆ ಶಾಸಕ ಕೃಷ್ಣಪ್ಪ ಮತ್ತು ಬೆಂಬಲಿಗರು ತೊಂದರೆ ಕೊಡುತ್ತಿದ್ದಾರೆ. ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಲು ಬಿಡುತ್ತಲೇ ಇಲ್ಲ. ಕಾಂಗ್ರೆಸ್ ಮುಖಂಡರು ಎಂದು ಹೇಳುವ ಕೆಲವರು ಪದೇ ಪದೇ ನನ್ನನ್ನು ನಿಂದಿಸುತ್ತಿದ್ದಾರೆ. ಆದ್ರೆ ವಾರ್ಡ್ ಜನರು ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ನಾನೊಬ್ಬಳು ಹೆಣ್ಣು ಮಗಳು ನನ್ನ ಹಿಂದೆ ಯಾರು ಇಲ್ಲ ಅಂತಾ ಕಿರುಕುಳ ನೀಡುತ್ತಿದ್ದಾರೆ. ವಾರ್ಡ್ ಕಚೇರಿಗಾಗಿ ಈಗಾಗಲೇ 30 ಲಕ್ಷ ರೂ. ಅನುದಾನ ನೀಡಲಾಗಿದೆ. ನಾವು ಯಾವುದೇ ಕೆಲಸಗಳನ್ನು ಮಾಡುವುದು ಅವರಿಗೆ ಇಷ್ಟವಿಲ್ಲ. ನನ್ನನ್ನು ಯಾವ ರೀತಿಯಲ್ಲಿ ತುಳಿಯಲು ಸಾಧ್ಯವಾಗುತ್ತೋ ಅಷ್ಟೆಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾರ್ಪೋರೇಟರ್ ಮಹಾಲಕ್ಷ್ಮಿ ಆರೋಪಿಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv