ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly Election) ಹಾಗೂ ದೆಹಲಿಯ ಮಹಾನಗರಪಾಲಿಕೆ (MCD) ಚುನಾವಣಾ ಸೋಲಿನ ಭೀತಿಯಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಗಂಭೀರ ಆರೋಪ ಮಾಡಿದ್ದಾರೆ.
अरविंद केजरीवाल जी की सुरक्षा को लेकर मैं चिंतित हुँ,क्योंकि लगातार भ्रष्टाचार,टिकिट बिक्री व जेल में बलात्कारी से दोस्ती व मसाज प्रकरण को लेकर AAP कार्यकर्ता व जनता ग़ुस्से में हैं।इनके MLA पिटे भी हैं। इसलिए दिल्ली के सीएम के साथ ऐसा ना हो.. सजा न्यायालय ही दे ????
— Manoj Tiwari ???????? (@ManojTiwariMP) November 24, 2022
Advertisement
ಕೇಜ್ರಿವಾಲ್ ಹತ್ಯೆಗೆ ಸಂಚು ರೂಪಿಸಿದ್ದು, ದೆಹಲಿ ಸಂಸದ ಮನೋಜ್ ತಿವಾರಿ (Manoj Tiwari) ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮನೋಜ್ ತಿವಾರಿ ಕೇಜ್ರಿವಾಲ್ ಭದ್ರತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಮರು ದಿವಸ ಸಿಸೋಡಿಯಾ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನ ಬಳಿಯೇ ಕೈ ನಾಯಕಿಯ ಕಾರು ಕಳ್ಳತನ – ವೀಡಿಯೋ ಪೋಸ್ಟ್ ಮಾಡಿ ಪಂಖೂರಿ ಪಾಠಕ್ ಕಿಡಿ
Advertisement
गुजरात व MCD चुनाव मे हार के डर से बौखलाई BJP @ArvindKejriwal की हत्या की साजिश रच रही है
इनके सांसद मनोज तिवारी खुलेआम अपने गुंडो को अरविंद जी पर हमला करने के लिए कह रहे है और इसकी पूरी प्लानिंग कर ली है
AAP इनकी टुच्ची राजनीति से नही डरती,इनके गुंडागर्दी का जबाव अब जनता देगी
— Manish Sisodia (@msisodia) November 24, 2022
Advertisement
ಅರವಿಂದ್ ಕೇಜ್ರಿವಾಲ್ ಅವರನ್ನ ಹತ್ಯೆ ಮಾಡಲು ಬಿಜೆಪಿ ಸಂಚು ರೂಪಿಸಿದೆ. ಸಂಸದ ಮನೋಜ್ ತಿವಾರಿ ಬಹಿರಂಗವಾಗಿಯೇ ತಮ್ಮ ಗುಂಡಾಗಳಿಗೆ ದಾಳಿ ಮಾಡುವಂತೆ ಹೇಳುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಯೋಜನೆ ರೂಪಿಸಿದ್ದಾರೆ. ಆದರೆ ಎಎಪಿ ಇಂತಹ ನೀಚ ರಾಜಕಾರಣಕ್ಕೆ ಹೆದರೋದಿಲ್ಲ. ಗೂಂಡಾಗಿರಿ ಮಾಡುವ ಜನರಿಗೆ ಅವರದ್ದೇ ರೀತಿಯಲ್ಲಿ ತಕ್ಕ ಉತ್ತರ ಕೊಡುತ್ತದೆ ಎಂದು ಸಿಸೋಡಿಯಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳಾ ನಾಯಕಿ ವಿರುದ್ಧ ಅಶ್ಲೀಲ ಟೀಕೆ ಆಡಿಯೋ ವೈರಲ್ – ಬಿಜೆಪಿ ನಾಯಕ ಸಸ್ಪೆಂಡ್
Advertisement
ಅರವಿಂದ್ ಕೇಜ್ರಿವಾಲ್ ಅವರ ಭದ್ರತೆಯ ಬಗ್ಗೆ ನಾನು ಕಳಕಳಿ ವ್ಯಕ್ತಪಡಿಸುತ್ತೇನೆ. ಏಕೆಂದರೆ ನಿರಂತರ ಭ್ರಷ್ಟಾಚಾರ, ಎಂಸಿಡಿ ಚುನಾವಣೆಯಲ್ಲಿ ಟಿಕೆಟ್ ಮಾರಾಟ, ಅತ್ಯಾಚಾರಿಗಳೊಂದಿಗೆ ಸ್ನೇಹ ಹಾಗೂ ಜೈಲಿನಲ್ಲಿ ಮಸಾಜ್ ಇಂತಹ ಹಲವು ಘಟನೆಗಳಿಂದ ಎಎಪಿ ಸ್ವಯಂ ಸೇವಕರು ಕೋಪಗೊಂಡಿದ್ದಾರೆ. ಅಲ್ಲದೇ ಕೆಲವು ಶಾಸಕರಿಗೂ ಥಳಿಸಿದ್ದಾರೆ. ದೆಹಲಿಯ ಮುಖ್ಯಮಂತ್ರಿಗಳಿಗೆ ಹೀಗೆ ಆಗಬಾರದು ಎಂದು ಹಿಂದಿಯಲ್ಲಿ ಮನೋಜ್ ತಿವಾರಿ ಟ್ವೀಟ್ ಮಾಡಿದ್ದರು.