ಬೆಳಗಾವಿ: ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರುಗಳು ಪಕ್ಷಭೇದ ಮರೆತು ಒಂದಾದ ಅಪರೂಪದ ಘಟನೆಗೆ ಕುಂದಾ ನಗರಿ ಸಾಕ್ಷಿಯಾಗಿದೆ.
ಹೌದು. ಒಂದು ಕಡೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬದ್ಧ ವೈರಿಗಳಾಗಿ ಕಾದಾಡುತ್ತಿದ್ದರೆ. ಚಿಂಚಲಿ ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಒಂದಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷ್ಯರನ್ನ ಕುರ್ಚಿಯಿಂದ ಕೆಳೆಗಿಳಿಸಲು ಯಶಸ್ವಿಯಾಗಿದ್ದಾರೆ.
Advertisement
ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಸದಸ್ಯರು ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯ ಅಧ್ಯಕ್ಷರನ್ನೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಕೆಳಗಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಚಿಂಚಲಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾಗರತ್ನ ಪೋಳ ಪಕ್ಷೇತರರಾಗಿ ಗೆದ್ದು, ಬಿಜೆಪಿಗೆ ಸೇರ್ಪಡೆಯಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
Advertisement
Advertisement
ಅಧ್ಯಕ್ಷೆ ನಾಗರತ್ನ ಪ್ರತಿಯೊಂದು ನಿರ್ಣಯವನ್ನು ತಮ್ಮ ಪತಿಯನ್ನೆ ಕೇಳಿ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ಪ್ರತಿ ಕೆಲಸದಲ್ಲೂ ಅಧ್ಯಕ್ಷೆಯ ಪತಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಸದಸ್ಯರು ಆರೋಪಿಸಿದ್ದಾರೆ. ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಚಿಂಚಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಕಲ್ಪಿಸಲಾಗಿತ್ತು.
Advertisement
ಒಟ್ಟು 19 ಜನ ಸದಸ್ಯರ ಬಲದ ಚಿಂಚಲಿ ಪಟ್ಟಣ ಪಂಚಾಯತ ನಲ್ಲಿ ಬಿಜೆಪಿಯಿಂದ 7 ಕಾಂಗ್ರೆಸ್ ನಿಂದ 6 ಹಾಗೂ ಪಕ್ಷೇತರ 6 ಜನ ಆಯ್ಕೆಯಾಗಿದ್ದರು. ಸದ್ಯ ಬಿಜೆಪಿ ಕಾಂಗ್ರೆಸ್ ಮತ್ತು ಪಕ್ಷೇತರರು ಸೇರಿ ಹಾಲಿ ಅಧ್ಯಕ್ಷೆ ನಾಗರತ್ನ ಪೋಳ ವಿರುದ್ಧವಾಗಿ 14 ಜನ ಸದ್ಯರು ಅವಿಶ್ವಾಸ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews