– ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
– ಬಿಜೆಪಿ ಅವಧಿಯಲ್ಲಿ ಕಿರುಕುಳ ಇತ್ತು: ಡಿಕೆಶಿ
ಬೆಂಗಳೂರು: ಕರ್ನಾಟಕ (Karnataka) ಗೂಗಲ್ (Google) ಕಂಪನಿಯ ಹೂಡಿಕೆ ಕಳೆದುಕೊಂಡಿದೆ. ನೆರೆಯ ತಮಿಳುನಾಡಿನಲ್ಲಿ ಗೂಗಲ್ ಕಂಪನಿ, ಫಾಕ್ಸ್‌ಕಾನ್ ಸಂಸ್ಥೆಯ ಸಹಯೋಗದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್ (Pixel Smartphone) ಹಾಗೂ ಡ್ರೋನ್ (Drone) ತಯಾರಿಕಾ ಘಟಕ ಸ್ಥಾಪಿಸಲಿದೆ.
ಈ ಸಂಬಂಧ ತಮಿಳುನಾಡು ಸರ್ಕಾರದ ಜೊತೆ ಗೂಗಲ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ವಾಸ್ತವದಲ್ಲಿ ಗೂಗಲ್ ಸಂಸ್ಥೆ ಕರ್ನಾಟಕದಲ್ಲಿ ಈ ಹೂಡಿಕೆ ಮಾಡಬೇಕಿತ್ತು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಇದು ತಮಿಳುನಾಡು (Tamil Nadu) ಪಾಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
Advertisement
Google set to invest billions in Tamil Nadu to produce Smartphones & Drones.
Karnataka is bearing the direct consequences of a lethargic, Sleeping Congress Sarkaara, that has completely lost its way looking directionless & driving the State towards a disaster owing to its… pic.twitter.com/BcgrLC2jpZ
— Vijayendra Yediyurappa (Modi Ka Parivar) (@BYVijayendra) May 24, 2024
ಕಾಂಗ್ರೆಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ. ಕರ್ನಾಟಕ ಶತಕೋಟಿ ಡಾಲರ್ ಹೂಡಿಕೆ ಕಳೆದುಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ರಾಜ್ಯಕ್ಕೆ ಬರಬೇಕಿದ್ದ ಹೂಡಿಕೆ ನೆರೆ ರಾಜ್ಯಕ್ಕೆ ಹೋಗಿದೆ ಅಂತ ಬಿಜೆಪಿ ಕಿಡಿಕಾರಿದೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡ ಟ್ವೀಟ್ ಮಾಡಿ ಸಿದ್ದು ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್- ಹಿಂದೆ ಉಗ್ರ ಕತ್ಯದಲ್ಲಿ ದೋಷಿಯಾಗಿದ್ದ ಹುಬ್ಬಳ್ಳಿ ವ್ಯಕ್ತಿ ಮತ್ತೆ ಅರೆಸ್ಟ್
Advertisement
Classic case of sour grapes!
BJP just cannot bear to see how well Karnataka is progressing with investments and new projects under Congress Govt. Since BJP itself drove away and harassed investors, it now seems that Karnataka’s new found status as an investment hub is making it…
— DK Shivakumar (@DKShivakumar) May 24, 2024
ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ಕೊಟ್ಟಿದ್ದಾರೆ. ಕರ್ನಾಟಕ (Karnataka) ಶಾಂತಿಯುತ ರಾಜ್ಯ. ಕರ್ನಾಟಕದ ಅಭಿವೃದ್ಧಿ ಮಾದರಿ ಜಗತ್ತನ್ನೇ ಆಕರ್ಷಿಸುತ್ತಿದೆ. ಬಂಡವಾಳ ಹೂಡಿಕೆದಾರರಿಗೆ ಬಿಜೆಪಿ ಅವಧಿಯಲ್ಲಿ ಕಿರುಕುಳ ಇತ್ತು. ಆದರೆ ನಮ್ಮ ಅವಧಿಯಲ್ಲಿ ಇದು ಬದಲಾಗಿದೆ. ನಮ್ಮ ಅವಧಿಯಲ್ಲಿ ಬಂಡವಾಳ ಹೂಡಿಕೆ ಎಷ್ಟು ಆಗಿದೆ ಎಂದು ಚುನಾವಣೆ ಮುಗಿದ ಮೇಲೆ ತಿಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.