ಬೆಂಗಳೂರು: ಒಂದು ದೇಶ ಒಂದು ಚುನಾವಣೆಯು (One Nation One Election) ಈ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಒಳಿತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ (Malleshwara) ಹವ್ಯಕ ಭವನದಲ್ಲಿ ಇಂದು (ಸೆ.7) ಏರ್ಪಡಿಸಿದ್ದ ಒಂದು ದೇಶ ಒಂದು ಚುನಾವಣೆ ಕುರಿತು ವಿದ್ಯಾರ್ಥಿ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಆಡಳಿತ ಸುಧಾರಣೆ ಜೊತೆಗೆ ಸಾವಿರಾರು ಕೋಟಿ ಹಣವನ್ನು ಉಳಿಸುವ ಕ್ರಮ ಇದು ಎಂದು ಮೆಚ್ಚುಗೆ ಸೂಚಿಸಿದರು.ಇದನ್ನೂ ಓದಿ: ಮೋದಿಜಿ ಯಿಂದ ಮಾತ್ರ ಭಾರತ ಮುನ್ನಡೆಸಲು ಸಾಧ್ಯ ಅಂತ ಜನ ಒಪ್ಪಿದ್ದಾರೆ: ವಿಜಯೇಂದ್ರ
ಕೆಟ್ಟ ವಿಚಾರಗಳು ಬಹಳ ಬೇಗ ಜನರನ್ನು ತಲುಪುತ್ತವೆ. ಒಳ್ಳೆಯ ವಿಚಾರ ಜನರನ್ನು ತಲುಪಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಈ ಒಳ್ಳೆಯ ವಿಚಾರದ ಕುರಿತು ಜಾಗೃತಿ ಮೂಡಿಸಬೇಕು. ವಿವಿಧ ಕ್ಷೇತ್ರಗಳ ಸಮಾಜದ ಗಣ್ಯರ ಮಧ್ಯೆ ಚರ್ಚೆ ಮಾಡಬೇಕು. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವದಲ್ಲಿ ಭಾರತವು ಅತ್ಯಂತ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಕೆಲವೇ ಕೆಲವು ವರ್ಷಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಇದನ್ನು ಮತ್ತು ಭಾರತದ ಏಳಿಗೆಯನ್ನು ಅಮೆರಿಕ ಸಹಿಸಿಕೊಳ್ಳದಿದ್ದರೆ ಒಪ್ಪಬಹುದು. ಆದರೆ, ಈ ದೇಶದ ಮಣ್ಣಿನ ಋಣ, ಅನ್ನದ ಋಣ ಪಡೆದ ರಾಹುಲ್ ಗಾಂಧಿ, ನಮ್ಮ ಮುಖ್ಯಮಂತ್ರಿಯವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದರೆ ಇದು ಈ ದೇಶದ ದುರಂತ ಎಂದು ಟೀಕಿಸಿದರು.
ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಇಂದು ಮಲ್ಲೇಶ್ವರದ ಹವ್ಯಕ ಭವನದಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತ ವಿದ್ಯಾರ್ಥಿ ನಾಯಕರ ಸಭೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ವಕ್ತಾರರಾದ ಶ್ರೀ @gauravbhatiabjp , ಒಂದು ದೇಶ ಒಂದು ಚುನಾವಣೆಯ ದಕ್ಷಿಣ ಭಾರತದ ಉಸ್ತುವಾರಿಗಳಾದ ಶ್ರೀ @anilkantony , ಮಾಜಿ… pic.twitter.com/bYwMqOnWdC
— BJP Karnataka (@BJP4Karnataka) September 7, 2025
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಮಾತನಾಡಿ, ಒಂದೇ ಚುನಾವಣೆ ಕುರಿತು ಅಧ್ಯಯನ ನಡೆಸಿ ವರದಿ ಪಡೆಯಲಾಗಿದೆ. ಇದು ಅನುಷ್ಠಾನಕ್ಕೆ ಯೋಗ್ಯ ಎಂಬ ವರದಿ ಲಭಿಸಿದೆ. 370ನೇ ವಿಧಿಯನ್ನು ತಾತ್ಕಾಲಿಕ ನೆಲೆಯಲ್ಲಿ ಹೇರಲಾಗಿತ್ತು. ಮತಬ್ಯಾಂಕ್, ತುಷ್ಟೀಕರಣದ ಸಲುವಾಗಿ ಅದನ್ನು ಖಾಯಂ ಮಾಡಿದ್ದರು. ಬಿಜೆಪಿ, 370ನೇ ವಿಧಿಯನ್ನು ತನ್ನ ಆಶ್ವಾಸನೆಯಂತೆ ರದ್ದು ಮಾಡಿತು. ಇನ್ನೂ ಜಿಎಸ್‌ಟಿ ಸರಳೀಕರಣದ ಮಹತ್ವದ ನಿರ್ಧಾರವನ್ನು ಮೋದಿಜೀ ಅವರ ಮಾರ್ಗದರ್ಶನದಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆಗೆದುಕೊಂಡಿದ್ದಾರೆ ಎಂದರು.ಇದನ್ನೂ ಓದಿ: Lunar Eclipse: ಚಂದ್ರನೇಕೆ ಕೆಂಪು ಕೆಂಪಾಗಲಿದ್ದಾನೆ?; ಗ್ರಹಣ ವೀಕ್ಷಣೆಗೆ ಎಲ್ಲೆಲ್ಲಿ ವ್ಯವಸ್ಥೆ?
ಈ ಮೊದಲು ದೇಶದಲ್ಲಿ ಒಂದು ರಾಷ್ಟ್ರ ಒಂದೇ ಚುನಾವಣೆ ಪದ್ಧತಿ ಇತ್ತು. ಆದರೆ, ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರು ಅನೇಕ ರಾಜ್ಯಗಳಲ್ಲಿ ಚುನಾಯಿತ ಸರ್ಕಾರವನ್ನು ರದ್ದು ಮಾಡಿ, ರಾಷ್ಟ್ರಪತಿ ಆಳ್ವಿಕೆ ಹೇರಿ ಈ ಗಿಟಾರ್‌ನ ತಂತಿ ಕಡಿದು ಹಾಕಿದರು ಎಂದು ಟೀಕಿಸಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಮಾತನಾಡಿ, ವಿವಿಧತೆಯಲ್ಲಿ ಏಕತೆ ಮತ್ತು ಒಗ್ಗಟ್ಟಿನ ಸಂದೇಶವನ್ನು ನಾವು ಒಂದು ರಾಷ್ಟ್ರ- ಒಂದು ಚುನಾವಣೆ ಎಂಬ ಸುಧಾರಣೆ ಮೂಲಕ ನೀಡಲು ಸಾಧ್ಯವಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಇದೊಂದು ಅಭಿಯಾನ ಆಗಬೇಕಿದೆ ಎಂದು ತಿಳಿಸಿದರು.ಇದನ್ನೂ ಓದಿ: ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು