ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekhar) ಅವರು ಅಡ್ಡಮತದಾನದ ಮೊರೆ ಹೋಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ (G.C Chandrashekhar) ಪರ ಮತ ಎಸ್‍ಟಿಎಸ್ ಚಲಾಯಿಸಿದ್ದಾರೆ. ಹೀಗಾಗಿ ಎಸ್‍ಟಿಎಸ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್ – ಕಾಂಗ್ರೆಸ್ ಪರ ಎಸ್.ಟಿ.ಸೋಮಶೇಖರ್ ಮತ
ಈ ಸಂಬಂಧ ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸೋಮಶೇಖರ್ ವಿರುದ್ಧ ಸಂಜೆ 4 ಗಂಟೆ ನಂತರ ಸ್ಪೀಕರ್ ಗೆ ದೂರು ಕೊಡ್ತೀವಿ. ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆಯೂ ದೂರಿನಲ್ಲಿ ತಿಳಿಸುವುದಾಗಿ ಹೇಳಿದರು.
ಎಲ್ಲರಿಗೂ ವಿಪ್ ಜಾರಿ ಮಾಡಿದ್ದೆವು. ಸೋಮಶೇಖರ್ ವಿರುದ್ಧ ಸ್ಪೀಕರ್ ಗೆ ದೂರು ಕೊಡಲು ನಿರ್ಧಾರ ಮಾಡಿದ್ದೇವೆ. ಅವರಿಗೆ ಖುದ್ದು ಭೇಟಿ ವಿಪ್ ಕೊಟ್ ಬಂದಿದ್ದೆ, ವಾಟ್ಸಪ್‍ನಲ್ಲೂ ಕಳಿಸಿದ್ದೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ನಿರ್ಧಾರ ಆಗಿದೆ. ಶಿವರಾಂ ಹೆಬ್ಬಾರ್ ಗೂ ವಿಪ್ ಕೊಡಲಾಗಿತ್ತು. ಆದರೆ ಅವರಿನ್ನೂ ಮತ ಹಾಕಲು ಬಂದಿಲ್ಲ ಎಂದರು.