ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ಕೈಜೋಡಿಸಿ ಒಟ್ಟಾಗಿ ಚುನಾವಣೆ ಎದುರಿಸಿದರೂ ರಾಜ್ಯದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಮತ್ತು ಕರೀಂನಗರ ಸಂಸದ ಬಂಡಿ ಸಂಜಯ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಟಿಆರ್‌ಎಸ್ ನಡುವೆ ತಿಳುವಳಿಕೆ ಇದೆ. ಅದಕ್ಕಾಗಿಯೇ ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ತೆಲಂಗಾಣದಲ್ಲಿ ಕೆಸಿಆರ್ ಅವರೊಂದಿಗೆ ಸರಣಿ ಸಭೆ ನಡೆಸಿದ್ದಾರೆ. ಅವರು ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ಹೋರಾಡಿದರೂ ಕೇಂದ್ರದಲ್ಲಿ ಹಾಗೂ ತೆಲಂಗಾಣದಲ್ಲಿ ಬಿಜೆಪಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: . ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್
Advertisement
Advertisement
ಕಾಂಗ್ರೆಸ್ ನಾಯಕ ಚುನಾವಣೆಯಲ್ಲಿ ಗೆದ್ದರೆ ಪಕ್ಷಾಂತವಾಗುತ್ತಾನೆ, ಇಲ್ಲದಿದ್ದರೆ ಪಕ್ಷವನ್ನೇ ಮಾರಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಈಗ ಪ್ರಶಾಂತ್ ಕಿಶೋರ್ ಟಿಆರ್‌ಎಸ್‍ಅನ್ನು ಕಾಂಗ್ರೆಸ್‍ಗೆ ಮಾರಲು ಬಂದಿದ್ದಾರೋ ಅಥವಾ ಕಾಂಗ್ರೆಸ್‍ನ್ನು ಟಿಆರ್‌ಎಸ್‍ಗೆ ಮಾರಲು ಬಂದಿದ್ದಾರಾ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದರು ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ: ಅಮೆರಿಕ