ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದಾರೆ.
ನಮಗೆ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸೀಟು ಬೇಕು. ಕೈ ಅಸಮಾಧಾನಿತರ ಪಟ್ಟಿ ನಮಗೆ ಕೊಡಿ, ನಾವು ಹ್ಯಾಂಡಲ್ ಮಾಡ್ತೀವಿ. ನಾವೇ ಆಪರೇಷನ್ ಮಾಡ್ತೀವಿ ಅನ್ನೋದು ಗೊತ್ತಾಗಲ್ಲ, ರಹಸ್ಯವಾಗಿ ಮುಗಿಸ್ತೀವಿ. ನೀವು ಸುಮ್ಮನೆ ನಮಗೆ ಡೈರೆಕ್ಷನ್ ಕೊಡಿ. ಮಿಕ್ಕಿದ್ದನ್ನು ನಾವ್ ನೋಡ್ಕೋತಿವಿ ಅಂತ ಯಡಿಯೂರಪ್ಪಗೆ ಅಮಿತ್ ಷಾ ಖಡಕ್ಕಾಗಿ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement
Advertisement
ಈ ಬೆನ್ನಲ್ಲೇ ನೇರ ಅಖಾಡಕ್ಕೆ ಅಮಿತ್ ಶಾ, ಪಿಯೂಷ್ ಗೋಯಲ್, ದೇವೇಂದ್ರ ಫಡ್ನವಿಸ್ ಇಳಿದಿದ್ದು, ಈ ಮೂವರು ತ್ರಿಮೂರ್ತಿಗಳಿಂದ ರಾಜ್ಯ ರಾಜಕೀಯದ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಈಗಾಗಲೇ ಈ ಮೂವರು ನಾಯಕರಿಂದ ಆಪರೇಷನ್ ಕಮಲವೂ ಶುರುವಾಗಿದೆ ಎನ್ನಲಾಗಿದೆ.
Advertisement
ಪಿಯೂಷ್ ಗೋಯಲ್‍ಗೆ ಬಳ್ಳಾರಿ, ಬೆಳಗಾವಿ ಗ್ಯಾಂಗ್ ಆಪರೇಟ್ ಮಾಡೋ ಜವಾಬ್ದಾರಿ ದೇವೇಂದ್ರ ಫಡ್ನಾವಿಸ್‍ಗೆ ಕೊಟ್ಟಿದ್ದಾರೆ. ಒಟ್ಟಾರೆ ಆಪರೇಷನ್ ಕಮಲದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವಹಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv