ನವದೆಹಲಿ: ಇಡೀ ದೇಶ ಕೊರೊನಾ ಸೋಂಕಿಗೆ ತತ್ತರಿಸಿ ಹೋಗಿದೆ. ಈ ವೈರಸ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ಮೋದಿ ಮೂರು ಬಾರಿ ಮಾತನಾಡಿದ್ದಾರೆ. ಆದರೆ ಗೃಹ ಸಚಿವ ಅಮಿತ್ ಶಾ ಮಾತ್ರ ಈ ನಡುವೆ ನಾಪತ್ತೆಯಾಗಿದ್ದಾರೆ.
Advertisement
ಕೊರೊನಾ ಸೋಂಕು ದೇಶವನ್ನು ಕಿತ್ತು ತಿನ್ನುತ್ತಿದೆ. ಭಾರತ ಲಾಕ್‍ಡೌನ್ ಆದ್ರೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡು ಬರ್ತಿಲ್ಲ. ಈ ನಡುವೆ ಲಾಕ್ ಡೌನ್ ಮುಂದುವರಿಯುತ್ತಾ ಇಲ್ವ ಅನ್ನೊ ಗೊಂದಲಗಳು ಸೃಷ್ಟಿಯಾಗಿದೆ. ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಆಕ್ಟಿವ್ ಆಗಿ ಕೆಲಸ ಮಾಡ್ತಿದೆ. ಆದರೆ ಸದಾ ಸುದ್ದಿಯಲ್ಲಿ ಇರ್ತಿದ್ದ ಗೃಹ ಸಚಿವ ಅಮಿತ್ ಶಾ ಮಾತ್ರ ಕೊರೊನಾ ವಿಚಾರದಲ್ಲಿ ಫುಲ್ ಸೈಲೆಂಟ್ ಆಗಿದ್ದಾರೆ.
Advertisement
Advertisement
ಕೊರೊನಾ ಸೋಂಕು ಬೆಳೆದುಕೊಳ್ಳುತ್ತಲೇ ಇದೆ. ದಿನ ಬೆಳಗಾದ್ರೆ ಪ್ರಧಾನಿ ಮೋದಿ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ. ಇತ್ತ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಟೊಂಕ ಕಟ್ಟು ನಿಂತಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈ ಶಂಕರ್ ವಿದೇಶದಲ್ಲಿರುವ ಭಾರತೀಯರನ್ನು ಕರೆ ತರುವ ಪ್ರಯತ್ನ ಸೇರಿ ಹಲವು ಪ್ರಮುಖ ಕೆಲಸಗಳ ಮಾಡ್ತಿದ್ದಾರೆ. ಇತ್ತ ಹಣಕಾಸು ಸಚವೆ ನಿರ್ಮಲ ಸೀತರಾಮನ್ ಸೇರಿ ಹಲವು ಸಚಿವರು ತಮ್ಮ ಖಾತೆಗಳ ಅನುಗುಣವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ ಗೃಹ ಸಚಿವ ಅಮಿತ್ ಶಾ ಮಾತ್ರ ಮುಖ್ಯ ವಾಹಿನಿಯಿಂದ ದೂರ ಉಳಿದುಕೊಂಡಿದ್ದಾರೆ.
Advertisement
ಕೊರೊನಾ ಸೋಂಕು ವಿಚಾರ ಶುರುವಾದಗಿನಿಂದ ಬಹುತೇಕ ಎಲ್ಲ ಸಚಿವರು ಬೇರೆ ಬೇರೆ ಕಾರಣಗಳಿಂದ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತಮ್ಮ ಇಲಾಖೆಯಿಂದ ಜನರಿಗೆ ಮಾಡುತ್ತಿರುವ ನೆರವುಗಳ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ ಅಮಿತ್ ಶಾ ಮಾತ್ರ ಈವರೆಗೂ ಗೃಹ ಇಲಾಖೆಯಿಂದ ನಡೆಯುತ್ತಿರುವ ಬೆಳವಣಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಂತ ಕೇಂದ್ರ ಗೃಹ ಇಲಾಖೆ ಏನು ಸುಮ್ಮನೆ ಕೂತಿಲ್ಲ. ತನ್ನೆಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ. ಇದರ ಎಲ್ಲ ಮಾಹಿತಿಯನ್ನು ಕಾರ್ಯದರ್ಶಿ ಪಿ.ಎಸ್ ಶ್ರೀವಸ್ತ ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಆದರೆ ಅಮಿತ್ ಶಾ ಈ ವರೆಗೂ ಒಂದು ಮಾತು ಆಡಿಲ್ಲ. ಹೀಗಾಗೀ ಸಾಕಷ್ಟು ಕುತೂಹಲ ಮೂಡಿದ್ದು ಅಮಿತ್ ಶಾ ಯಾಕೆ ದೂರು ಉಳಿದುಕೊಂಡಿದ್ದಾರೆ ಎಂದು ಚರ್ಚೆ ಆಗುತ್ತಿದೆ.
ಹಲವು ಅನುಮಾನ, ಚರ್ಚೆ:
* ಕೊರೊನಾ ಸಂಪೂರ್ಣ ಜವಬ್ದಾರಿಯನ್ನು ಪ್ರಧಾನಿ ಮೋದಿಗೆ ವಹಿಸಿದ್ರಾ ಅಮಿತ್ ಶಾ..?
* ಇದೊಂದು ರಾಷ್ಟ್ರೀಯ ದುರಂತ ಆಗಿರೋದ್ರರಿಂದ ಪ್ರಧಾನಿಯೇ ಮುಂದಾಳತ್ವದಲ್ಲಿ ನಡೆಯಲಿ ಎಂದು ಸುಮ್ಮನಾದ್ರ..?
* ಈ ವೇಳೆ ಎಲ್ಲ ವಿಪಕ್ಷಗಳು ಇಡೀ ದೇಶದ ಜನರನ್ನು ಒಗ್ಗೂಡಿಸಿಕೊಂಡು ಹೋಗಬೇಕು.
* ಆದರೆ ಅಮಿತ್ ಶಾ ವಿಪಕ್ಷಗಳ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿಲ್ಲ ಮತ್ತು ಎನ್.ಆರ್.ಸಿ, ಸಿಎಎ ವಿಚಾರದಲ್ಲಿ ಕೆಲವು ಸಮುದಾಯಗಳು ಅಮಿತ್ ಶಾ ವಿರುದ್ಧವಾಗಿರೊದ್ರರಿಂದ ವಿಪಕ್ಷ ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿ ಮೋದಿಗೆ ವಹಿಸರಬಹುದಾ.?
* ಜವಾಬ್ದಾರಿ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆಯಾ..?
ಹೀಗೆ ಹಲವು ಅನುಮಾನಗಳು ಈಗ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಅಲ್ಲದೇ ಕೇಂದ್ರ ಸಚಿವರ ಸಭೆಯಲ್ಲಿ ಕೂಡಾ ಅಮಿತ್ ಶಾ ಹೆಚ್ಚು ಭಾಗಿಯಾಗುತ್ತಿಲ್ಲ. ಒಂದೆರಡು ಸಭೆಗಳನ್ನು ಹೊರತುಪಡಿಸಿದ್ರೆ ಹೆಚ್ಚು ಆಸಕ್ತಿ ತೋರಿಲ್ಲ. ಹೆಚ್ಚು ಆಕ್ಟಿವ್ ಆಗಿದ್ದ ನಾಯಕ ಹೀಗೆ ಸುಮ್ಮನಾಗಿದ್ದು ಯಾಕೆ ಎನ್ನುವ ಪ್ರಶ್ನೆ ಪಕ್ಷದ ಕೆಲವು ನಾಯಕರಿಗೆ ಕಾಡುತ್ತಿದೆ. ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ್ ಚುನಾವಣೆಗೆ ಶಾ ಸಿದ್ಧವಾಗ್ತಿರಬಹುದು ಎಂದು ಇನ್ನು ಕೆಲವರು ಅಂದಾಜು ಮಾಡುತ್ತಿದ್ದಾರೆ.