ನವದೆಹಲಿ: ದೆಹಲಿಯಲ್ಲಿ (Delhi Election) ಎಎಪಿಗೆ (AAP) ಭಾರೀ ಹಿನ್ನಡೆಯಾದ ಬೆನ್ನಲ್ಲೇ ಈ ಜೀವಮಾನದಲ್ಲಿ ಬಿಜೆಪಿಗೆ (BJP) ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
Modi ji: Haan to kya bola tha.. 😂 pic.twitter.com/82oRBWeXxX
— maithun (@Being_Humor) February 8, 2025
Advertisement
2023 ರಲ್ಲಿ ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ಬಿಜೆಪಿ ಜೀವಮಾನದಲ್ಲಿ ಎಎಪಿಯನ್ನು ಎಂದಿಗೂ ಸೋಲಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಬಿಜೆಪಿ ಉದ್ದೇಶ ಎಎಪಿ ಸರ್ಕಾರವನ್ನು ಉರುಳಿಸುವುದಾಗಿದೆ. ನರೇಂದ್ರ ಮೋದಿ ದೆಹಲಿಯಲ್ಲಿ ಸರ್ಕಾರ ರಚಿಸಲು ಬಯಸುತ್ತಿದ್ದಾರೆ. ಚುನಾವಣೆಗಳ ಮೂಲಕ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ನಾನು ನರೇಂದ್ರ ಮೋದಿ ಜಿ ಅವರಿಗೆ ಹೇಳಲು ಬಯಸುತ್ತೇನೆ, ಈ ಜನ್ಮದಲ್ಲಿ ನೀವು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಮ್ಮನ್ನು ಸೋಲಿಸಲು ನಿಮಗೆ ಇನ್ನೊಂದು ಜನ್ಮ ಬೇಕು ಎಂದಿದ್ದರು.
Advertisement
Advertisement
ಹ್ಯಾಟ್ರಿಕ್ ಗೆಲುವಿನ ಕನಸುಕಂಡಿದ್ದ ಎಎಪಿಯ ಕನಸು ಭಗ್ನವಾಗಿದೆ. ಇದರಿಂದ ಎಎಪಿ ಕಚೇರಿಯಲ್ಲಿ ಮೌನ ಕವಿದಿದ್ದು, ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಶುರುವಾಗಿದೆ. 27 ವರ್ಷದ ನಂತರ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ.
Advertisement
ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಸೋತಿದ್ದಾರೆ. ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾಗೆ 1800 ಮತಗಳಿಂದ ಗೆಲುವು ಸಾಧಿಸಿದ್ದಾರೆ.