– ಇಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ
ಮೈಸೂರು: ಇಲ್ಲಿ ನಡೆಯುವ ಸಮಾವೇಶದಲ್ಲಿ ಹಾಲಿ, ಮಾಜಿ ಪ್ರಧಾನಿಗಳ ಸಮಾಗಮ ದೊಡ್ಡ ಸಂದೇಶ ರವಾನಿಸುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ತಿಳಿಸಿದರು.
Advertisement
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಯದುವೀರ್ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮೋದಿ ಸಮಾವೇಶ ನಮ್ಮ ಶಕ್ತಿ ಹೆಚ್ಚಿಸುತ್ತೆ. ಸಮಾವೇಶದಲ್ಲಿ ಹಾಲಿ ಪ್ರಧಾನಿಗಳ (Narendra Modi) ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D.Deve Gowda) ಭಾಗವಹಿಸುತ್ತಾರೆ. ಇವರಿಬ್ಬರ ಸಮಾಗಮ ದೊಡ್ಡ ಸಂದೇಶ ರವಾನೆ ಮಾಡುತ್ತೆ ಎಂದು ಹೇಳಿದರು. ಇದನ್ನೂ ಓದಿ: ಈ ಬಾರಿ ಮೋದಿ ಗರಿಷ್ಠ 214-240 ಸ್ಥಾನ ಗೆಲ್ಲಬಹುದು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
Advertisement
Advertisement
ನಾನು ಜನ ಸಾಮಾನ್ಯರ ಕೈಗೆ ಸಿಗಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ನಾನು ಮಾತಿನ ಮೂಲಕ ಪ್ರತಿಕ್ರಿಯೆ ಕೊಡಲ್ಲ. ನನ್ನ ನಡವಳಿಕೆ ಮೂಲಕ ಜನರಿಗೆ ಅರ್ಥ ಮಾಡಿಸುತ್ತೇನೆ ಎಂದು ವಿಪಕ್ಷಗಳ ಟೀಕೆಗೆ ಖಡಕ್ ಪ್ರತಿಕ್ರಿಯೆ ನೀಡಿದರು.
Advertisement
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿಯಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಆಗಮನದಿಂದ ಪಕ್ಷದಲ್ಲಿ ಇನ್ನಷ್ಟು ಶಕ್ತಿ ಹೆಚ್ಚಾಗಲಿದೆ. ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬುವ ಕೆಲಸವೂ ಆಗುತ್ತದೆ ಎಂದರು. ಇದನ್ನೂ ಓದಿ: ಭಾನುವಾರ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್ ಶೋ – ಎಷ್ಟು ಗಂಟೆಗೆ ಎಲ್ಲಿ ಮೋದಿ ಕಾರ್ಯಕ್ರಮ?
ಮೈಸೂರಿನಲ್ಲೇ ಠಿಕಾಣಿ ಹೂಡಿರುವ ಸಿಎಂ ಕುರಿತು ಮಾತನಾಡಿ, ವಿರೋಧ ಪಕ್ಷಗಳು ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜಕೀಯವಾಗಿ ಅವರ ಕೆಲಸವನ್ನು ಅವರ ಮಾಡುತ್ತಿದ್ದಾರೆ. ನಾವು ನಮ್ಮ ಬಗ್ಗೆಯಷ್ಟೇ ಗಮನ ಕೊಡುತ್ತೇವೆ. ಆ ನಿಟ್ಟಿನಲ್ಲಿ ಮುಂದುವರಿಯುತ್ತೇವೆ ಎಂದು ಹೇಳಿದರು.