ಹಾವೇರಿ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ 1,40,882 ಮತಗಳ ಅಂತರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಶಿವಕುಮಾರ ಉದಾಸಿ ಅವರು 6,83.660 ಮತಗಳನ್ನು ಪಡೆದಿದ್ದು, ಡಿ.ಆರ್.ಪಾಟೀಲ್ 5,42,778 ಮತಗಳನ್ನು ಗಳಿಸಿದ್ದಾರೆ. ಹಾವೇರಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಒಟ್ಟು 17,02,618 ಮತದಾರರ ಪೈಕಿ 12,63,209 ಮಂದಿ ಮತದಾನ ಮಾಡಿದ್ದರು.
Advertisement
Advertisement
ಗೆಲುವಿಗೆ ಕಾರಣವಾದ ಅಂಶಗಳು ಏನು?
ಹಾವೇರಿ ಬಿಜೆಪಿ ಶಾಸಕ ಇರುವ ಕ್ಷೇತ್ರ. ತನ್ನದೆಯಾದ ಶಕ್ತಿ ಹೊಂದಿರುವ ಶಾಸಕ ನೆಹರು ಓಲೇಕಾರ ಹಾಗೂ ಶಿವರಾಜ್ ಸಜ್ಜನ್ ಕ್ಷೇತ್ರದಲ್ಲಿ ಹಿಡಿತವನ್ನ ಸಾಧಿಸಿದ್ದಾರೆ. ಹೀಗಾಗಿ ಲಿಂಗಾಯತರು ಸಮುದಾಯ ಅಧಿಕವಾಗಿ ಮತದಾನ ಮಾಡಿದೆ. ಬ್ಯಾಡಗಿಯಲ್ಲಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಣ್ಣನವರ್ ಶಾಸಕರಾಗಿದ್ದರು. ಅವರಿಗೆ ಟಿಕೆಟ್ ತಪ್ಪಿಸಿ ಎಸ್.ಆರ್.ಪಾಟೀಲಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿಯಲ್ಲಿ ಹೊಸಮುಖ ಕ್ಷೇತ್ರದ ವ್ಯಕ್ತಿ ವಿರುಪಾಕ್ಷಪ್ಪ ಗೆಲವು ಪಡೆದಿದ್ದರು. ತಮ್ಮ ಪಂಚಮಸಾಲಿ ಸಮುದಾಯದ ಹೆಚ್ಚು ಮತ ಬಿಜೆಪಿಗೆ ಬಿದ್ದಿವೆ.
Advertisement
ಹಿರೇಕೆರೂರು ಕ್ಷೇತ್ರದಲ್ಲಿ ಯು.ಬಿ.ಬಣಕಾರ ಕೇವಲ 550 ಮತಗಳಿಂದ ಸೋಲುಕಂಡಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಾದರಲಿಂಗಾಯತ ಮತಗಳು ಹೆಚ್ಚು ಇದ್ದು ಮೋದಿ ಅಲೆ ಹಾಗೂ ಯಡಿಯೂರಪ್ಪ ಲಿಂಗಾಯತ ಮತಗಳನ್ನ ಸೆಳೆದಿದ್ದರು. ಇನ್ನೂ ಹಾನಗಲ್ ಕ್ಷೇತ್ರದಲ್ಲಿ ತನ್ನದೆಯಾದ ಹಿಡಿತ ಸಾಧಿಸಿದ್ದ ಶಾಸಕ ಸಿ.ಎಂ.ಉದಾಸಿ ಲಿಂಗಾಯತ ಮತಗಳು ಹಾಗೂ ಮೋದಿ ಮತಗಳನ್ನು ಪಡೆದುಕೊಂಡಿದ್ದಾರೆ.
Advertisement
ರಾಣೇಬೆನ್ನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ಶಾಸಕರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬೆಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನ ಗಳಿಸಿದ್ದರು. ಕುರುಬ ಸಮುದಾಯದ ಮತಗಳನ್ನ ಪಡೆಯುದಲ್ಲದೆ ಮೋದಿ ಅಲೆ ಇರೋ ಹಿನ್ನೆಲೆ, ವೈಯುಕ್ತಿಕ ವರ್ಚಸ್ಸು ಹಾಗೂ ಹಾಲಿ ಶಾಸಕ ಬೆಂಬಲ ಪಡೆದ ಬಿಜೆಪಿ ಕುರುಬ ಸಮುದಾಯದ ಮತ ಪಡೆಯುವಲ್ಲಿ ಉದಾಸಿ ಯಶಸ್ವಿಯಾಗಿದ್ದಾರೆ.
ಶಿರಹಟ್ಟಿ ಕ್ಷೆತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಪಕ್ಷ ಸಂಘಟನೆ ಹಾಗೂ ತನ್ನದೆಯಾದ ಸ್ವಂತ ವರ್ಚಸ್ಸುಯನ್ನ ಶಾಸಕ ರಾಮಣ್ಣ ಲಂಬಾಣಿ ಹೊಂದಿದ್ದಾರೆ. ಹೀಗಾಗಿ ಲಂಬಾಣಿ ಸಮುದಾಯದ ಮತಗಳನ್ನ ಪಡೆದಿದ್ದಾರೆ. ರೋಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಳಕಪ್ಪ ಬಂಡಿ ಕ್ಷೇತ್ರದಲ್ಲಿ ತನ್ನದೆಯಾದ ಹಿಡಿದವನ್ನ ಇಟ್ಟುಕೊಂಡಿದ್ದಾರೆ. ಮೋದಿ ಅಲೆ ಹಾಗೂ ಅವರು ಗೆದ್ದ ಅಂತರದ ಲೀಡನ್ನ ತಮ್ಮ ಪಕ್ಷದ ಅಭ್ಯರ್ಥಿಗೆ ಕೊಡಿಸುವ ಯಶಸ್ವಿಯಾಗಿದ್ದಾರೆ.
ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಆಡಳಿತದಲ್ಲಿದೆ. ಆದರೆ ಮಾಜಿ ಶಾಸಕ ಸಿ.ಸಿ.ಪಾಟೀಲ ಕ್ಷೇತ್ರದಲ್ಲಿ ತನ್ನದೆಯಾದ ವರ್ಚಸ್ಸು ಹೊಂದಿದ್ದಾರೆ. ಇಲ್ಲಿಯ ಲಿಂಗಾಯತ ಹಾಗೂ ಹಿಂದುಳಿದ ಸಮುದಾಯ ಮತಗಳು ಬಿಜೆಪಿಗೆ ಬಿದ್ದಿದೆ.