ರಾಯಚೂರು: ರಾಜ್ಯದಲ್ಲಿ ಒಂದೆಡೆ ಎರಡನೇ ಹಂತದ ಲೋಕಸಭಾ ಚುನಾವಣಾ (Loksabha Elections 2024) ಕಾವು ಏರುತ್ತಿದ್ದರೆ ಇನ್ನೊಂದೆಡೆ ರಾಯಚೂರಿನಲ್ಲಿ ದಿನೇದಿನೇ ಏರುತ್ತಿರುವ ಬಿಸಿಲಿನಲ್ಲೂ ಪಾಲಿಟಿಕ್ಸ್ ನಡೆದಿದೆ.
ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ (G. Kumar Nayak) ಪಾತ್ರವಿದೆ ಅಂತ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ (Raja Amareshwar Nayak) ಆರೋಪ ಮಾಡಿದ್ದಾರೆ. ಈ ಮೂಲಕ ರಾಯಚೂರಿನ ಬಿರು ಬಿಸಿಲಿಗೂ ರಾಜಕೀಯ ನಂಟು ಅಂಟಿಕೊಂಡಿದೆ. ಇದನ್ನೂ ಓದಿ: ಹೆದರಬೇಡಿ, ಹೆದರಿ ಓಡಿಹೋಗ್ಬೇಡಿ – ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ
Advertisement
Advertisement
ಆರ್ ಟಿ ಪಿ ಎಸ್ ಹಾಗೂ ವೈಟಿಪಿಎಸ್, ಪವರ್ ಗ್ರಿಡ್ ನಿಂದ ನಮಗೆ ಶಾಖ ಹೆಚ್ಚಾಗಿದೆ. ಜಿಲ್ಲೆಗೆ ವೈಟಿಪಿಎಸ್ ತಂದವರು ಈಗಿನ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ್ ನಾಯಕ್ . ಇದು ಜಿ. ಕುಮಾರ್ ನಾಯಕ್ ಜನರಿಗೆ ಕೊಟ್ಟಂತ ಕಾಣಿಕೆ. ಕುಮಾರ್ ನಾಯಕ್ ಡಿಸಿ ಇದ್ದಾಗ, ಕೆಪಿಸಿಲ್ ಎಂ.ಡಿ ಆಗಿದ್ದಾಗ ಇವು ಬಂದಿವೆ. ಬೇರೆ ಜಿಲ್ಲೆ ಜನ ಪರಿಸರ ಕೆಡುತ್ತೆ ಅಂತ ತಿರಸ್ಕಾರ ಮಾಡಿದ್ದ ಪವರ್ ಗ್ರಿಡ್, ಶಾಖೊತ್ಪನ್ನ ಕೇಂದ್ರ ಜಿಲ್ಲೆಗೆ ಬಂದಿವೆ ಎಂದರು.
Advertisement
ಕಲ್ಲಿದ್ದಲು ಸುಟ್ಟು ವಿದ್ಯುತ್ ಉತ್ಪಾದಿಸುತ್ತಿರುವುದರಿಂದ ಜಿಲ್ಲೆಯ ತಾಪಮಾನ ಹೆಚ್ಚಾಗಿದೆ. ಇಷ್ಟು ಬಿಸಿಲು ಅನುಭವಿಸೋಕೆ ಜಿ. ಕುಮಾರ್ ನಾಯಕ್ ಕಾರಣ ಅಂತ ಅಮರೇಶ್ವರ್ ನಾಯಕ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಪ್ರತಿನಿತ್ಯ 44 ರಿಂದ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು ಜನ ಹೈರಾಣಾಗಿದ್ದಾರೆ ಈಗ ಬಿಸಿಲಿಗೂ ಪೊಲಿಟಿಕ್ಸ್ ಅಂಟಿಕೊಂಡಿದೆ.