ಮೈಸೂರು: ಲೋಕಸಭಾ ಚುನಾವಣೆಗೆ ಅರಮನೆ ನಗರಿಯಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಜೆಡಿಎಸ್ ಮತ ಸೆಳೆಯಲು ರೆಬೆಲ್ ಸ್ಟ್ರಾಟಜಿ ಉಪಯೋಗಿಸುತ್ತಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಜಂಟಿಯಾಗಿ ಪ್ರಚಾರ ಮಾಡುತ್ತಿದ್ದಕ್ಕೆ ಪ್ರಶ್ನೆ ಮಾಡುತ್ತಿದ್ದರು. ಆದರೆ ಜೆಡಿಎಸ್ ಅವರಿಗೆ ಮಂಡ್ಯದಲ್ಲಿ ರೆಬೆಲ್ ಕ್ಯಾಂಡಿಡೇಟ್ ಹಾಕಿ ಬೆನ್ನಿಗೆ ಚೂರಿ ಹಾಕುತ್ತಿರುವುದು ಯಾವ ಪಕ್ಷ?, ತುಮಕೂರು ಹಾಗೂ ಹಾಸನದಲ್ಲಿ ಮೈತ್ರಿ, ಮೈತ್ರಿ ಎಂದು ಜೆಡಿಎಸ್‍ಗೆ ಚೂರಿ ಹಾಕುತ್ತಿರುವುದು ಯಾವ ಪಕ್ಷ ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್‍ಗೆ ಎಚ್ಚರಿಸುತ್ತಾ ಮತ ಬೇಟೆಗೆ ಇಳಿದಿದ್ದಾರೆ.
ಕಾಂಗ್ರೆಸ್ ಬಗ್ಗೆ ಜೆಡಿಎಸ್ ಕಾರ್ಯಕರ್ತರಿಗೆ ಮತ್ತು ದೇಶಭಕ್ತರಿಗೆ ಗೊತ್ತಿದೆ. ಜಂಟಿಯಾಗಿ ಪ್ರಚಾರ ಮಾಡಿದಾಕ್ಷಣ ಕಾರ್ಯಕರ್ತರು ಪ್ರಭಾವಿತರಾಗಲ್ಲ. ಕಾರ್ಯಕರ್ತರು ಮನಸ್ಸು ಮಾಡಿದರೆ ಈ ಬಾರಿ ದೇಶಕ್ಕೆ ಮೋದಿ ಬೇಕು ಎಂದು ಎಲ್ಲರೂ ನಮಗೆ ಸಪೋರ್ಟ್ ಮಾಡುತ್ತಾರೆ. ದೋಖಾ ಮಾಡುವ ಕಾಂಗ್ರೆಸ್‍ಗೆ ಜೆಡಿಎಸ್ ಕಾರ್ಯಕರ್ತರು ಸಪೋರ್ಟ್ ಮಾಡಲ್ಲ ಎಂದು ಹೇಳಿದ್ರು.