ಭುವನೇಶ್ವರ: ಒಡಿಶಾದ (Odisha) ಖುರ್ದಾ ಜಿಲ್ಲೆಯಲ್ಲಿ ಇವಿಎಂ (EVM) ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ (BJP Candidate) ಹಾಗೂ ಶಾಸಕ ಪ್ರಶಾಂತ್ ಜಗದೇವ್ (Prashant Jagdev) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಜಗದೇವ್ ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಲು ಬೇಗನಿಯಾ ವಿಧಾನಸಭಾ ಕ್ಷೇತ್ರದ ಬೋಲಗಾಡ್ ಬ್ಲಾಕ್‍ನ ಕೌನ್ರಿಪಟ್ನಾದ ಬೂತ್‍ಗೆ ತೆರಳಿದ್ದರು. ಈ ವೇಳೆ ಇವಿಎಂ ತಾಂತ್ರಿಕ ದೋಷದಿಂದ ಕೆಲ ಸಮಯ ಅವರು ಕಾಯಬೇಕಾಗಿ ಬಂತು. ಇದರಿಂದ ಕೋಪಗೊಂಡ ಅವರು, ಚುನಾವಣಾ ಸಿಬ್ಬಂದಿ ಮೇಲೆ ರೇಗಿದ್ದಾರೆ. ಬಳಿಕ ಇವಿಎಂ ಅನ್ನು ಎಳೆದಾಡಿದ್ದು, ಅದು ಕೆಳಗೆ ಬಿದ್ದು ಒಡೆದು ಹೋಗಿದೆ. ಇದನ್ನೂ ಓದಿ: ಉಡುಪಿ ಹೈವೇಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ – ಗರುಡ ಗ್ಯಾಂಗ್‍ನ 6 ಪುಡಿ ರೌಡಿಗಳು ಅರೆಸ್ಟ್
Advertisement
ಈ ಸಂಬಂಧ ಚುನಾವಣಾ ಸಿಬ್ಬಂದಿ ದೂರು ನೀಡಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯ ಜೊತೆಗೆ ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಖುರ್ದಾ ಜೈಲಿನಲ್ಲಿ ಇರಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಡಿಇಒ) ಪೊಲೀಸರು ಮನವಿ ಮಾಡಿದ್ದಾರೆ.
Advertisement
Advertisement
ಪ್ರಶಾಂತ್ ಜಗದೇವ್ ಬಂಧನದ ಬೆನ್ನಲ್ಲೇ ಅವರ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಬಿಜೆಪಿ (BJP) ಮುಖಂಡರು ಆರೋಪಿಸಿದ್ದಾರೆ.
Advertisement
ಖುರ್ದಾ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಪ್ರಶಾಂತ್ ಜಗದೇವ್ ಕಣಕ್ಕಿಳಿದಿದ್ದಾರೆ. ಅವರು ಮತದಾರರಾಗಿ ನೋಂದಾಯಿಸಿಕೊಂಡಿರುವ ಬೇಗನಿಯಾ ವಿಧಾನಸಭಾ ಕ್ಷೇತ್ರದ ಬೋಲಗಾಡ್ ಬ್ಲಾಕ್‍ನ ಕೌನ್ರಿಪಟ್ನಾದ ಬೂತ್ 114 ರಲ್ಲಿ ಶನಿವಾರ ಈ ಘಟನೆ ನಡೆದಿತ್ತು. ಇದನ್ನೂ ಓದಿ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ – ಸಿಐಡಿಗೆ ವರ್ಗಾವಣೆ