ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಕಾಂಗ್ರೆಸ್ ಬಿ.ಎನ್. ಚಂದ್ರಪ್ಪ ವಿರುದ್ಧ ಗೆಲುವು ಸಾಧಿಸಿದ್ದಾರೆ.
80,067 ಮತಗಳ ಅಂತರದಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಬಿಜೆಪಿ ನಾರಾಯಣಸ್ವಾಮಿ 6,26,015 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಬಿ.ಎನ್. ಚಂದ್ರಪ್ಪ 5,45,948 ಮತಗಳನ್ನು ಪಡೆದುಕೊಂಡಿದ್ದಾರೆ.
ಗೆಲುವಿಗೆ ಕಾರಣವೇನು?
ಆನೇಕಲ್ ನಾರಾಯಣಸ್ವಾಮಿ ಜಯಭೇರಿ ಬಾರಿಸಲು ಅವರು ಹಿಂದುವಾದಿ, ಉತ್ತಮ ವಾಗ್ಮಿ ಹಾಗು ಎಸ್.ಸಿ ಲೆಫ್ಟ್ ಸಮುದಾಯದ ಹುರಿಯಾಳು ಆಗಿರುವುದೇ ಮುಖ್ಯ ಕಾರಣವಾಗಿದೆ. ಹಾಗೆಯೇ ಬಿಜೆಪಿ ಸರ್ಕಾರದ ಆಡಳಿತದ ವೇಳೆ ಸಮಾಜಕಲ್ಯಾಣ ಸಚಿವರಾಗಿ ಉತ್ತಮ ಸೇವೆ ಸಲ್ಲಿದ್ದಾರೆ. ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಹವಾ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿಗೆ ಮಾನ್ಯತೆ, ಸಂಘಪರಿವಾರದ ಶಕ್ತಿ, ಕಾಂಗ್ರೆಸ್ ವಿರೋಧಿ ಅಲೆ, ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಪ್ರಚಾರದಿಂದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರ ಜಯಭೇರಿಯಿಂದ ಜನತೆ ಲೋಕಸಮರದಲ್ಲೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರು ಕ್ಷೇತ್ರದ ಅಭಿವೃದ್ಧಿಯಲ್ಲಿ ಕಾರ್ಯವನ್ನೂ ಮಾಡುವಲ್ಲಿ ವಿಫಲವಾಗಿದ್ದು ಬಿ.ಎನ್. ಚಂದ್ರಪ್ಪ ಅವರಿಗೆ ಸೋಲಿನ ರುಚಿ ತೋರಿಸಿದೆ. ಬರದನಾಡಿನ ಕನಸಿನಕೂಸು ಭದ್ರಾ ಮೇಲ್ದಂಡ ಯೋಜನೆ ಪೂರ್ಣಗೊಳಿಸಲು ಯತ್ನಿಸಲು ನಿರ್ಲಕ್ಷ್ಯ ತೋರಿಸಿದ್ದು, ನೇರೆ ರೈಲು ಮಾರ್ಗ ನೆನೆಗುದಿಗೆ ಬಿದ್ದರು ಧ್ವನಿ ಎತ್ತದ ಸಂಸದ ಎಂಬ ಆರೋಪದಿಂದ, ಹಳ್ಳ ಹಿಡಿದ ಸಂಸದರ ಆದರ್ಶ ಗ್ರಾಮ ಯೋಜನೆ ಜೊತೆಗೆ ಕೋಟೆನಾಡಲ್ಲಿ ಮೋದಿ ಹವಾಕ್ಕೆ ಮೈತ್ರಿ ಅಭ್ಯರ್ಥಿಗಳ ಆಟ ನಡೆಯಲ್ಲಿಲ್ಲ. ಕೈ ಶಾಸಕರು ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಸೋತು ಸುಣ್ಣವಾಗಿದ್ದರು. ಇದರಿಂದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳತ್ತು. ಈ ಕಾರಣಗಳಿಂದಲೇ ಮೈತ್ರಿ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.