ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಮೋದಿ ಅಲೆಯಲ್ಲಿ 2,74,621 ಮತಗಳ ಅಂತರದಿಂದ ಮೂರನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ.
ಕಟೀಲ್ 7,74,285 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಮಿಥುನ್ ರೈ 4,99,664 ಮತಗಳನ್ನು ಪಡೆದಿದ್ದಾರೆ. ಪ್ರಮುಖ ಕಾರ್ಯಕರ್ತರ ಜೊತೆ ಜಿಲ್ಲೆಯಾದ್ಯಂತ ನೇರ ಸಂಪರ್ಕ, ಕ್ಷೇತ್ರದಲ್ಲಿ ಪ್ರಬಲವಾಗಿರುವ ಮೋದಿ ಅಲೆ, ಮೋದಿ ಗೆಲುವಿಗಾಗಿ ವೈಮನಸ್ಸು ದೂರವಿಟ್ಟು ದುಡಿದ ಕಾರ್ಯಪಡೆಯಿಂದ ನಳಿನ್ ಕುಮಾರ್ ಮತ್ತೊಮ್ಮೆ ಗೆಲುವು ಪಡೆದಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, ತೀರ್ಪು ಸ್ವೀಕರಿಸಿ ಸಿಎಂ ಕುಮಾರಸ್ವಾಮಿ ಅಧಿಕಾರ ಬಿಟ್ಟು ಕೊಡಬೇಕು. ಮೈತ್ರಿ ಪಕ್ಷದ ಶಾಸಕರೇ ಸರಕಾರ ಬೀಳಿಸಲು ರೆಡಿಯಾಗಿದ್ದಾರೆ. ಸರ್ಕಾರ ಬೀಳುತ್ತೆ ಎನ್ನಲು ಯಾವುದೇ ಜ್ಯೋತಿಷ್ಯ ಬೇಕಿಲ್ಲ. ತಮ್ಮದೇ ದುರಾಡಳಿತದಿಂದ ಸರಕಾರ ಬೀಳಲಿ. ಸರಕಾರ ಬಿದ್ದರೆ ಬಿಜೆಪಿ ಸರಕಾರ ರಚನೆಗೆ ಪ್ರಯತ್ನಿಸಲಿದೆ. ಹಾಗಂತ ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುವುದಿಲ್ಲ ಎಂದು ಹೇಳಿದರು.
Advertisement
ಡಿಕೆ ಶಿವಕುಮಾರ್ ಅಭ್ಯರ್ಥಿಯಾಗಿದ್ದ ಮಿಥುನ್ ರೈ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಗೆಲುವಿಗಾಗಿ ಒಗ್ಗಟ್ಟು ತೋರಿಸಿರಲಿಲ್ಲ. ವಿಧಾನಸಭಾ ಚುನಾವಣೆ ಉಳ್ಳಾಲ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 7 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು.
Advertisement
ಮಂಗಳೂರಿನಲ್ಲಿ ನಡೆದ ಮೋದಿ ಸಮಾವೇಶಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಅವರು ಸಂದರ್ಶನ ಒಂದರಲ್ಲಿ ಮಂಗಳೂರು ಸಮಾವೇಶವನ್ನು ಪ್ರಸ್ತಾಪಿಸಿ, ಭಾರೀ ಸಂಖ್ಯೆಯಲ್ಲಿ ಜನರನ್ನು ನೆರೆದಿರುವುದನ್ನು ನೋಡಿ ಅಚ್ಚರಿಗೊಂಡಿದ್ದೆ. ರಸ್ತೆಯುದ್ದಕ್ಕೂ ಜನ ನಿಂತಿರುವುದನ್ನು ಗಮನಿಸಿ ರೋಡ್ ಶೋ ಇಲ್ಲದೇ ಇದ್ದರೂ ಜನರಿಗಾಗಿ ಕೈ ಬೀಸಿದ್ದೆ ಎಂದು ತಿಳಿಸಿದ್ದರು.