ಭೋಪಾಲ್: ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕರೊಬ್ಬರಿಗೆ ವಯೋವೃದ್ಧರೊಬ್ಬರು ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಧಾನಿ ಭೋಪಾಲ್‍ನಿಂದ ಸುಮಾರು 272 ಕಿ.ಮೀ ದೂರದಲ್ಲಿರುವ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಗೆ ಭಾನುವಾರ ಪ್ರಚಾರ ನಡೆಯುತ್ತಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು.
Advertisement
ವಿಡಿಯೋದಲ್ಲಿ ದಿನೇಶ್ ಶರ್ಮಾ ಸಾಲಾಗಿ ನಿಂತಿದ್ದ ವ್ಯಕ್ತಿಗಳ ಬಳಿ ಮತ ಹಾಕುವಂತೆ ಕೇಳುತ್ತಿದ್ದು, ಈ ಮಧ್ಯ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡಿದ್ದಾರೆ. ಆಗ ಶರ್ಮಾ ಮೊದಲು ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದ್ರೆ ನಂತರ ಅವರೇ ಹಾರ ಹಾಕಿಸಿಕೊಂಡಿರೋದನ್ನ ಕಾಣಬಹುದು.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ನನ್ನವರಲ್ಲಿ ಒಬ್ಬರು. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಹೇಳಿದ್ದಾರೆ.
Advertisement
ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಆದ್ದರಿಂದ ಹಲವು ಬಾರಿ ಈ ಬಗ್ಗೆ ನಮ್ಮ ಮಹಿಳೆಯರು ಆಗಿನ ಅಧ್ಯಕ್ಷರಿಗೆ ದೂರು ನೀಡಲು ಹೋಗಿದ್ದರು. ಆದ್ರೆ ಬದಲಿಗೆ ಅವರ ವಿರುದ್ಧವೇ ದೂರು ದಾಖಲಾಗಿತ್ತು. ರಾತ್ರಿ ಹೊತ್ತಲ್ಲೂ ಪೊಲೀಸ್ ಠಾಣೆಗೆ ಅನೇಕ ಬಾರಿ ಕರೆಸಿದ್ದಾರೆ. ಅದಕ್ಕಾಗಿ ಈ ರೀತಿ ಮಾಡಿದೆ ಎಂದು ಚಪ್ಪಲಿ ಹಾರ ಹಾಕಿದ ವೃದ್ಧ ಮಾಧ್ಯಮಗಳಿಗೆ ಹೇಳಿದ್ದಾರೆ.