ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವಾ ಅವರನ್ನು ಬಿಜೆಪಿಯ ಡಾ.ಭರತ್ ಶೆಟ್ಟಿ ಸೋಲಿಸಿದ್ದಾರೆ.
ಭರತ್ ಶೆಟ್ಟಿ ಜಯಗಳಿಸುತ್ತಿದ್ದಂತೆಯೇ ಇತ್ತೀಚೆಗೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ದೀಪಕ್ ರಾವ್ ಕುಟುಂಬಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೀಪಕ್ ತಾಯಿ ಭರತ್ ಶೆಟ್ಟಿಯವರ ಹಣೆಗೆ ಪ್ರಸಾದ ಹಚ್ಚಿ, ದೃಷ್ಟಿ ತೆಗೆದು, ಹೂಹಾರ ಹಾಕಿ ಸ್ವಾಗತಿಸಿದ್ದಾರೆ.
Advertisement
ನಂತರ ಭರತ್ ಅವರು ದೀಪಕ್ ಫೋಟೋಗೆ ಹೂ ಹಾರ ಹಾಕಿ, ಕೈಮುಗಿದಿದ್ದಾರೆ. ಈ ಸಂದರ್ಭದಲ್ಲಿ ದೀಪಕ್ ತಾಯಿ ಕಣ್ಣೀರು ಸುರಿಸಿದ್ದು, ಭರತ್ ಶೆಟ್ಟಿ ಸಾಂತ್ವಾನ ನೀಡಿದ್ದಾರೆ.
Advertisement
ನನ್ನನ್ನು ನಾಲ್ಕನೇ ಬಾರಿ ಗೆಲ್ಲಿಸಿ ಮತ್ತೊಮ್ಮೆ ಅವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಚಿಕ್ಕಮಗಳೂರಿನ ಜನತೆಗೆ ನಾನು ಶಿರಭಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನನ್ನ ಗೆಲುವನ್ನು @BJP4Karnataka ಪಕ್ಷಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ.
ನಿಮ್ಮ ಬಲಿದಾನವನ್ನು ನಾವು ಎಂದಿಗೂ ಮರೆಯುವುದಿಲ್ಲ.
— C T Ravi ???????? ಸಿ ಟಿ ರವಿ (@CTRavi_BJP) May 15, 2018
Advertisement
ಸದ್ಯ ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಏಕೈಕ ಪಕ್ಷವಾಗಿ ಹೊರಹೊಮ್ಮಿದ್ದು, ದಕ್ಷಿಣ ಕನ್ನಡದ ಒಟ್ಟು 8 ಕ್ಷೇತ್ರಗಳ ಪೈಕಿ 7ರಲ್ಲಿ ಜಯಭೇರಿ ಬಾರಿಸಿದೆ.
Advertisement
ದಕ್ಷಿಣ ಕನ್ನಡ ಜಿಲ್ಲೆ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದಾರೆ?
* ಮೂಡಬಿದಿರೆ – ಉಮಾನಾಥ್ ಕೊಟ್ಯಾನ್(ಬಿಜೆಪಿ) – ಅಭಯ್‍ಚಂದ್ರ ಜೈನ್(ಕಾಂಗ್ರೆಸ್)
* ಮಂಗಳೂರು ಉತ್ತರ – ಡಾ.ಭರತ್ ಶೆಟ್ಟಿ(ಬಿಜೆಪಿ) – ಮೊಯಿದ್ದೀನ್ ಬಾವಾ(ಕಾಂಗ್ರೆಸ್)
* ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್(ಬಿಜೆಪಿ) – ಜೆ.ಆರ್.ಲೋಬೋ(ಕಾಂಗ್ರೆಸ್)
* ಮಂಗಳೂರು – ಯು.ಟಿ ಖಾದರ್(ಕಾಂಗ್ರೆಸ್) – ಸಂತೋಷ್ ಕುಮಾರ್ ರೈ(ಬಿಜೆಪಿ)
* ಬಂಟ್ವಾಳ – ಯು.ರಾಜೇಶ್ ನಾಯ್ಕ್(ಬಿಜೆಪಿ) – ಬಿ.ರಮಾನಾಥ್ ರೈ(ಕಾಂಗ್ರೆಸ್)
* ಪುತ್ತೂರು – ಸಂಜೀವ ಮಠಂದೂರ್(ಬಿಜೆಪಿ) – ಶಕುಂತಳಾ ಶೆಟ್ಟಿ(ಕಾಂಗ್ರೆಸ್)
* ಸುಳ್ಯ – ಎಸ್.ಅಂಗಾರ(ಬಿಜೆಪಿ) – ಬಿ.ರಘು(ಕಾಂಗ್ರೆಸ್)
* ಬೆಳ್ತಂಗಡಿ – ಹರೀಶ್ ಪೂಂಜಾ(ಬಿಜೆಪಿ) – ವಸಂತ ಬಂಗೇರ(ಕಾಂಗ್ರೆಸ್)
We dedicate the first victory of @BJP4Karnataka in Moodabidare to our Karyakarta "Prashant Poojary" who was murdered by Jihadis supported by Communal CONgress.
We will not rest until justice is provided to Prashant and His Family. pic.twitter.com/Abs5DLnVlV
— C T Ravi ???????? ಸಿ ಟಿ ರವಿ (@CTRavi_BJP) May 15, 2018