ಕಾರವಾರ: ಕಳೆದ ಐದು ಬಾರಿಯೂ ಹಿಂದುತ್ವದ ಅಲೆಯಿಂದ ಜಯಗಳಿಸಿದ್ದ ಅನಂತಕುಮಾರ್ ಅವರು ಎರಡನೇ ಬಾರಿ ಮೋದಿ ಅಲೆ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ.
ಹೌದು. ಉತ್ತರ ಕನ್ನಡದಲ್ಲಿ ಒಟ್ಟೂ 11,54,390 ಮತಗಳು ಚಲಾವಣೆಯಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 16,017 ಸಾವಿರ ನೋಟಾ ಮತಗಳು ಚಲಾವಣೆಯಾಗಿದೆ. ಅದರಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ವಿರುದ್ಧ ಅನಂತ್‍ಕುಮಾರ್ ಅವರು 4,79,649 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ. ಹೆಗಡೆ 7,86,042 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಆನಂದ್ ಆಸ್ನೋಟಿಕರ್ 3,06,393 ಮತಗಳನ್ನು ಪಡೆಡು ಭಾರೀ ಸೋಲನ್ನು ಅನುಭವಿಸಿದ್ದಾರೆ.
Advertisement
ಅಭಿಮಾನದ ವಿಶ್ವಾಸಕ್ಕೆ ನತಮಸ್ತಕನಾಗಿದ್ದೇನೆ….!!!!
ನನ್ನ ಕ್ಷೇತ್ರದ ಜನತೆ, ಮತದಾರ ಪ್ರಭು ತೋರಿರುವ ಇಂತಹ ಅಗಾಧ ಔಧಾರ್ಯದ ನಂಬಿಕೆಯ ಮುಂದೆ ನಾನು ಅಕ್ಷರಶಃ ತಲೆ ಬಾಗಿದ್ದೇನೆ..!
ಈ ಗೆಲುವು ಸಂಪೂರ್ಣವಾಗಿ ನಮ್ಮ ಸಂಘಟನೆ ಹಾಗು ಪಕ್ಷದ ಸಿದ್ಧಾಂತಕ್ಕೆ ಸಲ್ಲಬೇಕು!!#ModiAagaya #DeshKaGauravModihttps://t.co/9fI9DDNZbX
— Anantkumar Hegde (@AnantkumarH) May 23, 2019
Advertisement
ಗೆದ್ದಿದ್ದು ಹೇಗೆ?
ಯಾವುದೇ ಅಭಿವೃದ್ಧಿ ಗೆಲ್ಲಬೇಕಾದರೇ ಪಕ್ಷದ ಕಾರ್ಯಕರ್ತರ ಶ್ರಮ ಇರಲೇ ಬೇಕು. ಆ ದಿಕ್ಕಿನಲ್ಲಿ ಹೇಳುವುದಾದರೇ ಬಿಜೆಪಿ ಕಾರ್ಯಕರ್ತರ ಶ್ರಮ ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರದಲ್ಲಿ ಹೆಚ್ಚಾಗಿತ್ತು. ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಸರ್ಕಾರದ ನಿಲುವುಗಳನ್ನು, ಸಾಧನೆಗಳನ್ನು ಅನಾಯಾಸವಾಗಿ ಜನರ ಮುಂದೆ ಇಟ್ಟಿರುವುದು ಬಿಜೆಪಿಯ ಪ್ಲಸ್ ಪಾಯಿಂಟ್ ಆಗಿತ್ತು. ಇದೇ ಕಾರಣಕ್ಕೆ ಅನಂತ್‍ಕುಮಾರ್ ಅವರು ಸಲೀಸಾಗಿ ಲೋಕಸಮರವನ್ನು ಗೆದ್ದು ಮತ್ತೋಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದಾರೆ.
Advertisement
ಕಳೆದ ಚುನಾವಣೆಗೆ ಹೋಲಿಸಿದರೆ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಜನರೊಂದಿಗೆ ಬೆರತಿರುವುದು ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಶ್ರಮದಿಂದ ನಾಲ್ಕು ಬಿಜೆಪಿ ಶಾಸಕರನ್ನು ಗೆದ್ದಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಿದೆ. ಇದಲ್ಲದೇ ಪಕ್ಷದಲ್ಲೇ ಇದ್ದು ವಿರೋಧಿಗಳಾಗಿದ್ದ ಶಿರಸಿ ಶಾಸಕ ವಿಶ್ವೇಶ್ವರ ಭಟ್ ಕಾಗೇರಿ ಅನಂತಕುಮಾರ್ ಪರ ಪ್ರಚಾರ ಮಾಡಿರುವುದು ಸಹ ಬಿಜೆಪಿಗೆ ಗೆಲುವಿದೆ ಬುನಾದಿ ಕಲ್ಪಿಸಿಕೊಟ್ಟಿತ್ತು.
Advertisement
ಆನಂದ್ ಆಸ್ನೋಟಿಕರ್ ಸೋಲಲು ಕಾರಣವೇನು?
ಹಲವು ಬಾರಿ ಪಕ್ಷ ಬದಲಾವಣೆಯಿಂದ ನಂಬಿಕೆ ಕೆಡಿಸಿಕೊಂಡಿದ್ದು. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದ ಜನರ ಜೊತೆ ಸಂಪರ್ಕ ಕಳೆದುಕೊಂಡಿದ್ದು ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರು ಸೋಲಲು ಮುಖ್ಯ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ದೇಶಪಾಂಡೆ ಜೊತೆ ವೈಯಕ್ತಿಕವಾಗಿ ಹೆಸರು ಕೆಡಿಸಿಕೊಂಡು ವಿರೋಧ ಮಾಡಿದ್ದು ಹಾಗೂ ಕಾಂಗ್ರೆಸ್ಸಿನ ಮಾರ್ಗರೇಟ್ ಆಳ್ವ ಬಣದಲ್ಲಿ ಹೆಚ್ಚು ಆತ್ಮೀಯವಾಗಿದ್ದು ಆಸ್ನೋಟಿಕರ್ ಅವರೊಗೆ ಸೋಲು ತಂದಿದೆ ಎನ್ನಬಹುದು. ಮೈತ್ರಿಕೂಟದ ಸಮನ್ವಯತೆ ಕಾಪಾಡಿಕೊಳ್ಳದೇ ಇರುವುದು ಹಾಗೂ ಮೂಲ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಬ್ಬರನ್ನೂ ಕಡೆಗಣಿಸಿರುವುದು, ಸ್ಪರ್ಧೆ ಸಂದರ್ಭದಲ್ಲಿ ಸ್ಥಳೀಯ ನಾಯಕರು ಇವರ ಪರ ನಿಲ್ಲದೇ ಬಹಿರಂಗವಾಗಿ ಅಸಮದಾನ ಹೊರಹಾಕಿರುವುದು ಆನಂದ್ ಆಸ್ನೋಟಿಕರ್ ಅವರಿಗೆ ಭಾರಿ ಅಂತರದಲ್ಲಿ ಸೋಲು ಅನಿಭವಿಸುವಂತೆ ಮಾಡಿದೆ.
ಕ್ಷೇತ್ರವಾರು ವಿವರ:
1. ಖಾನಾಪುರ: ಬಿಜೆಪಿ-1,13,386
ಮೈತ್ರಿಕೂಟ- 25,108 ಮತ
2. ಕಿತ್ತೂರು: ಬಿಜೆಪಿ-92,339
ಮೈತ್ರಿಕೂಟ- 37,337
3. ಹಳಿಯಾಳ: ಬಿಜೆಪಿ- 81,629
ಮೈತ್ರಿಕೂಟ-39,865
4. ಕಾರವಾರ: ಬಿಜೆಪಿ- 1,13,135
ಮೈತ್ರಿಕೂಟ- 37,349
5. ಕುಮಟಾ: ಬಿಜೆಪಿ-99,609
ಮೈತ್ರಿಕೂಟ- 33,179
6. ಭಟ್ಕಳ: ಬಿಜೆಪಿ- 94,560
ಮೈತ್ರಿ ಕೂಟ- 51,290
7. ಶಿರಸಿ: ಬಿಜೆಪಿ-1,03,904
ಮೈತ್ರಿಕೂಟ-38,996
8. ಯಲ್ಲಾಪುರ: ಬಿಜೆಪಿ-84,649
ಮೈತ್ರಿಕೂಟ-43,006
ಅಂಚೆ ಮತ ವಿವರ:
ಒಟ್ಟು 3199 ಮತಗಳು ಚಲಾವಣೆಯಾಗಿದೆ. ಅದರಲ್ಲಿ ಬಿಜೆಪಿ- 2831 ಮತ, ಮೈತ್ರಿಕೂಟ-263 ಮತಗಳನ್ನು ಗಳಿಸಿದೆ.
ಸುಧಾಕರ್- 40, ನಾಗರಾಜ್ ನಾಯ್ಕ- 7, ನಾಗರಾಜ್ ಶೇಟ್- 4, ಮಂಜುನಾಥ್ ಸದಾಶಿವ- 7, ಸುನಿಲ್ ಪವಾರ್- 6, ಅನಿತಾ ಶೇಟ್- 16, ಕುಂದಾಬಾಯಿ- 7, ಚಿದಾನಂದ್- 4, ನಾಗರಾಜ್ ಶಿರಾಲಿ- 5, ಬಾಲಕೃಷ್ಣ ಪಾಟೀಲ್- 3, ಮಹ್ಮದ್ ಜಬುರುದ್ ಕತೀಬ್- 6 ಮತಗಳನ್ನು ಗಳಿಸಿದ್ದಾರೆ.
ಮೈತ್ರಿ ಕೂಟದಲ್ಲಿ ಹೊಂದಾಣಿಕೆ ಇಲ್ಲದೇ ಬಹಿರಂಗವಾಗಿ ಕ್ಷೇತ್ರದಲ್ಲಿ ನಾಯಕರು ಅಸಮಧಾನ ತೋಡಿಕೊಂಡಿರುವುದು ಹೆಚ್ಚು ಬಿಜೆಪಿಗೆ ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ಮೋದಿ ಹವ ಇರುವುದು, ಪ್ರಭಲ ಅಭ್ಯರ್ಥಿ ಎದುರಾಳಿಯಾಗಿರದೇ ಇರುವುದು ಹಾಗೂ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಲಾಭ, ಮೈತ್ರಿಕೂಟದ ಅಭ್ಯರ್ಥಿ ಪರ ದೇಶಪಾಂಡೆ ಸೇರಿದಂತೆ ಉಳಿದ ನಾಯಕರು ಹೆಚ್ಚು ಪ್ರಚಾರ ಮಾಡದೇ ಅಸಮಧಾನ ಹೊರಹಾಕಿದ್ದು ಅನಂತ್‍ಕುಮಾರ್ ಅವರಿಗೆ ಮತ್ತೊಮ್ಮೆ ವಿಕ್ಟರಿ ತಂದುಕೊಟ್ಟಿದೆ.