ಚಾಮರಾಜನಗರ: ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಹಿರಿಯ ಸಚಿವರನ್ನು ತೆಗೆಯಬೇಕು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿರಿಯ ಸಚಿವರಿಗೆ ಕೋಕ್ ನೀಡುವ ವಿಚಾರಕ್ಕೆ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಸ್ವಾಗತ ಮಾಡ್ತೇನೆ. ಕೋಕ್ ಕೊಟ್ರೂ ಸ್ವಾಗತ, ಇಟ್ಕೊಂಡ್ರು ಸ್ವಾಗತ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದ್ರೆ ಹಿರಿಯ ಸಚಿವರನ್ನು ತೆಗೆಯಬೇಕು ಎಂದರು. ಇದನ್ನೂ ಓದಿ: ಮುಸ್ಲಿಮರಿಂದ ಕೆತ್ತಿದ ಮೂರ್ತಿ ಪೂಜೆಗೆ ಯೋಗ್ಯವಲ್ಲ: ಆಂದೋಲಾ ಶ್ರೀ
Advertisement
Advertisement
ಯಾರನ್ನು ತೆಗೆಯುತ್ತಾರೋ ತೆಗೆಯಲಿ ಯುವಕರಿಗೆ, ಹೊಸಬರಿಗೆ ಆದ್ಯತೆ ನೀಡಬೇಕು. ಬಹಳಷ್ಟು ಜನ ಹೊಸ ಶಾಸಕರಿದ್ದಾರೆ. ನಾವು ಹಳೆಯ ಶಾಸಕರು ನಾನು 10 ಚುನಾವಣೆ ಎದುರಿಸಿ 9ರಲ್ಲಿ ಗೆದ್ದಿದ್ದೇನೆ. ನನ್ನನ್ನು ತೆಗೆದ್ರೂ ಸೈ, ಇಟ್ಕೊಂಡ್ರು ಸೈ. ಪಾರ್ಟಿ ಕೆಲಸ ಕೊಟ್ಟರು ಓಕೆ. ಸಚಿವ ಸಂಪುಟ ವಿಚಾರ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಪುನರ್‌ರಚನೆಯೋ, ವಿಸ್ತರಣೆಯೋ ನನಗೆ ಗೊತ್ತಿಲ್ಲ. ಒಂದು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ಸರ್ಕಾರ ನಡೆಸುವಾಗ ಹೆಚ್ಚು-ಕಡಿಮೆ ಆಗುವುದು ಸಹಜ ಆಗ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ನುಡಿದರು. ಇದನ್ನೂ ಓದಿ: ಪಾಪ ಸಿದ್ದರಾಮಯ್ಯಗೆ ಇತ್ತೀಚೆಗೆ ಏನಾಗ್ತಿದೆಯೋ ಗೊತ್ತಾಗ್ತಿಲ್ಲ: ಸುಧಾಕರ್ ತಿರುಗೇಟು
Advertisement
ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರ ಕುರಿತಂತೆ ಮಾತನಾಡಿ, ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದ್ರೆ ಸ್ವಾಗತ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿಗಳ ಮಗ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದ್ರೆ ತಪ್ಪಿಲ್ಲ ಎಂದು ವಿಜಯೇಂದ್ರ ಪರ ಉಮೇಶ್ ಕತ್ತಿ ಬ್ಯಾಟಿಂಗ್ ಮಾಡಿದರು.