ಮತದಾನದಂದು ಕಣ್ಣೀರಾಕಿದ್ದ ಮಂಡ್ಯ ಬಿಜೆಪಿ ಅಭ್ಯರ್ಥಿ – ಇಂದು ಕಣ್ಣೀರು ಹಾಕೋದ್ಯಾರು?

Advertisements

ಮಂಡ್ಯ: ಇಂದು ವಿಧಾನ ಪರಿಷತ್ ಫಲಿತಾಂಶ ಹೊರ ಬೀಳಲಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ನಡುವೆ ನೇರಹಣಾಹಣಿ ನಡೆಯಲಿದೆ. ಮತದಾನವೇ ಬಿಜೆಪಿ ಅಭ್ಯರ್ಥಿ ಕಣ್ಣೀರು ಹಾಕಿದ್ದರು. ಆದರೇ ಇಂದು ಕಣ್ಣೀರು ಹಾಕೋದ್ಯಾರು ಎನ್ನುವ ಲೆಕ್ಕಾಚಾರ ಶುರುವಾಗಿದೆ.

Advertisements

ಮತದಾನದ ದಿನವೇ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಕಣ್ಣೀರು ಹಾಕಿದ್ದರು. ಮತದಾದರರು ನನ್ನ ಕೈ ಬಿಡಲ್ಲ. ನಾನೂ ಕೊನೇ ಕ್ಷಣದವರೆಗೂ ಹೋರಾಟ ಮಾಡುತ್ತೇನೆ. ನನ್ನ ಕುರಿತಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು. ಆದರೆ ಇಂದು ವಿಧಾನ ಪರಿಷತ್ ಫಲಿತಾಂಶ ಹೊರಬೀಳಲಿದ್ದು, ಇಂದು ಯಾರು ಕಣ್ಣೀರು ಸುರಿಸುತ್ತಾರೆ ಎನ್ನವುದನ್ನು ಕಾದು ನೋಡಬೇಕಾಗಿದೆ.

Advertisements

ಉಭಯಪಕ್ಷಗಳಿಗೂ ಪ್ರತಿಷ್ಠೆಯ ಕಣವಾದ ಪರಿಷತ್ ಚುನಾವಣೆ. ಯಾರೇ ಗೆದ್ದರೂ ಕಡಿಮೆ ಅಂತರದಲ್ಲೇ ಗೆಲ್ತಾರೆ ಎಂಬ ಲೆಕ್ಕಾಚಾರ ಇದೆ. ಆರಂಭದಲ್ಲಿ ತ್ರಿಕೋನ ಸ್ಪರ್ಧೆಯಲ್ಲಿದ್ದು, ಕಡೆಗಳಿಗೆಯಲ್ಲಿ ಬಿಜೆಪಿ ಆತ್ಮವಿಶ್ವಾಸ ಕಳೆದುಕೊಂಡಂತೆ ಕಂಡುಬಂದಿದೆ. ನಾಯಕತ್ವದ ಕೊರತೆ, ಅಭ್ಯರ್ಥಿ ಮೇಲಿನ ಅಸಮಾಧಾನ, ಒಗ್ಗಟ್ಟಿನ ಕೊರತೆಯೇ ಜೆಡಿಎಸ್‍ಗೆ ಮುಳುವಾಗುತ್ತಾ? ಪಕ್ಷ ನಿಷ್ಠೆಯ ಮತಗಳು ನಡೆದಿದ್ರೆ ಜೆಡಿಎಸ್ ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಮಂಡ್ಯ ಪರಿಷತ್ ರಿಸಲ್ಟ್ ತೀವ್ರ ಕುತೂಹಲ ಮೂಡಿಸಿದೆ.

Advertisements
Exit mobile version