-ತನಿಖಾ ಏಜೆನ್ಸಿಗಳನ್ನ ಟೀಸಿಸುವುದು ಸಿಎಂಗೆ ಶೋಭೆ ತರಲ್ಲ
ರಾಮನಗರ: ಕ್ವಾರಿ ಹಾಗೂ ಗಣಿಗಾರಿಕೆ ನಡೆಸೋರ ಮೇಲೆ ಐಟಿ ದಾಳಿ ನಡೆದ ಬಗ್ಗೆ ಸಿಎಂ ರಿಯಾಕ್ಟ್ ಮಾಡುತ್ತಾರೆ ಅಂದರೆ ಅವರ ನಿಲುವನ್ನ ಸಿಎಂ ಸ್ಪಷ್ಟಿಕರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು, ತನಿಖಾ ಏಜೆನ್ಸಿಗಳನ್ನ ಟೀಕೆ ಮಾಡುವುದು ಸಿಎಂ ಅವರಿಗೆ ಶೋಭೆ ತರಲ್ಲ. ಇದಕ್ಕೆ ಕ್ಷಮೆ ಕೋರಬೇಕು. ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಹವಾಲ ಹಣವನ್ನ ನಮ್ಮದಲ್ಲ ಎಂದರು. ನಿನ್ನೆ ಡಿಕೆ ಸುರೇಶ್ ಘೋಷಣೆ ಮಾಡಿ ಅದನ್ನ ನಮ್ಮದು ಎಂದು ಒಪ್ಪಿಕೊಂಡಿದ್ದಾರೆ. ಬೇಕಾದಾಗ ಒಂದು ರೀತಿ ಬೇಡವೆಂದಾಗ ಒಂದು ರೀತಿ ಹೇಳಿಕೆ ನೀಡುವುದಲ್ಲ ಎಂದರು.
Advertisement
Advertisement
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿಪಿ ಯೋಗೇಶ್ವರ್, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ತಮ್ಮ ಮಕ್ಕಳನ್ನ ಚುನಾವಣೆಗೆ ನಿಲ್ಲಿಸಿದ್ದು ಕಳೆದ ಒಂದುವರೆ ವರ್ಷದಿಂದ ಯಾರ್ಯಾರ ಬಳಿ ಏನೇನು ಕಲೆಕ್ಟ್ ಮಾಡಿದ್ದಾರೆ. ಆ ಹಣದ ಬಲದಿಂದ ತಮ್ಮ ಮಕ್ಕಳನ್ನ ಎಂಪಿ ಮಾಡಲಿಕ್ಕೆ ಹೊರಟಿದ್ದಾರೆ. ಆದ್ದರಿಂದಲೇ ಅವರಿಗೆ ಐಟಿ ಭಯ ಕಾಡುತ್ತಿದೆ ಎಂದರು.
Advertisement
ಸಿಎಂ ಎಚ್‍ಡಿಕೆಯವರಿಗೆ ಈ ಚುನಾವಣೆಯನ್ನ ಎದುರಿಸೋಕೆ ಯಾವುದೇ ನೈತಿಕತೆಯಿಲ್ಲ. ಹಣ ಬಲದ ಮೇಲೆಯೇ ಈ ಚುನಾವಣೆ ಎದುರಿಸಬೇಕು. ಕಂಟ್ರಾಕ್ಟರ್‍ಗಳು, ಗುತ್ತಿಗೆದಾರರು, ಪಾಲುದಾರರು ಸರ್ಕಾರದಲ್ಲಿ ಬಂದ ಕಮಿಷನ್ ಹಣ. ಅಲ್ಲದೇ ಶಾಸಕಿ ಅನಿತಾ ಕುಮಾರಸ್ವಾಮಿ ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹತ್ತಿರ, ಪೊಲೀಸರು, ಗುತ್ತಿಗೆದಾರರ ಹತ್ತಿರ ಹಣ ಕಲೆಕ್ಟ್ ಮಾಡಿದ್ದಾರೆ ಎಂಬುದು ಜಗಜ್ಜಾಹಿರಾಗಿದೆ. ಅವರು ಕಲೆಕ್ಟ್ ಮಾಡಿರುವ ಕಪ್ಪುಹಣದ ಮೇಲೆ ಐಟಿ ದಾಳಿ ಮಾಡಿರಬಹುದು ಅದರಲ್ಲಿ ತಪ್ಪೇನಿದೆ. ನಾವು ಕೂಡಾ ಐಟಿ ಇಲಾಖೆಗೆ ಸಾಕಷ್ಟು ಬಾರಿ ಇಲ್ಲಿ ಹಣದ ದಂಧೆ ನಡೆಯುತ್ತೆ, ಹಣ ಚೆಲ್ಲುತ್ತಾರೆ ಎಂದು ಮನವಿ ಮಾಡಿದ್ದೇವು. ಸಚಿವ ರೇವಣ್ಣ, ಸಿಎಂ ಕೂಡ ಬಹಳಷ್ಟು ಹಣ ಲೂಟಿ ಮಾಡಿದ್ದಾರೆ. ಡಿಕೆ ಬ್ರದರ್ಸ್ ರ ಹಣದ ಏರಿಕೆ ಪೈಪೋಟಿಯಂತಿದೆ ಎಂದು ವಾಗ್ದಾಳಿ ನಡೆಸಿದರು.