ಬೆಂಗಳೂರು: ವಿಧಾನ ಪರಿಷತ್‌ಗೆ ಬಿಜೆಪಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್ ಟಿಕೆಟ್ ದೊರೆತಿದೆ.
ಹಾಲಿ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿಗೆ ಮತ್ತೊಂದು ಅವಕಾಶ ನೀಡಿರುವ ಹೈಕಮಾಂಡ್, ರಾಜ್ಯ ನಾಯಕರ ಲೆಕ್ಕಾಚಾರವನ್ನು ವರಿಷ್ಠರು ತಲೆಕೆಳಗು ಮಾಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಶಾಕ್ – ಮೇ 20ರಂದೇ ಸುಳಿವು ನೀಡಿದ್ದ ಪ್ರಧಾನಿ ಮೋದಿ
Advertisement
Advertisement
ಮಹಿಳಾ ಕೋಟದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ, ಹಿಂದುಳಿದ ವರ್ಗ ಕೋಟದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
Advertisement
ಇದೇ ವೇಳೆ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿಗೆ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಹೊರಟ್ಟಿ ಅವರಿಗೆ ಹೈಕಮಾಂಡ್ ನೀಡಿದ ಭರವಸೆಯಂತೆ ಟಿಕೆಟ್ ದೊರಕಿದೆ. ಇದನ್ನೂ ಓದಿ: ಪರಿಷತ್ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅತೃಪ್ತಿ – ಗುಂಪುಗಾರಿಕೆಗೆ ಮನ್ನಣೆ ನೀಡದ ಹೈಕಮಾಂಡ್