ಉಡುಪಿ: ಕಾಂಗ್ರೆಸ್ (Congress) ಗ್ಯಾರಂಟಿಯಲ್ಲಿ ಹತ್ತಾರು ವೈಫಲ್ಯಗಳು ಇವೆ. ನಾವು ಬಹಳ ಎಚ್ಚರಿಕೆಯ ಯೋಜನೆಗಳನ್ನು ಘೋಷಿಸಿದ್ದೆವು. ಬಿಜೆಪಿ ಶಾಶ್ವತ ಯೋಜನೆಗಳನ್ನು ಘೋಷಿಸಿ ಗೆದ್ದಿದೆ. ತಾತ್ಕಾಲಿಕ ಸಂತೋಷ ಕೊಡುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಕೊಟ್ಟಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಹೇಳಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನೇತೃತ್ವ ಇಲ್ಲ. ಬಿಜೆಪಿಗೆ (BJP) ಭದ್ರ ನೇತೃತ್ವ ಇದೆ. ಮೋದಿಯನ್ನು (Narendra Modi) ಸೋಲಿಸಲು ಒಕ್ಕೂಟ ರಚನೆ ಮಾಡಲಾಗಿದೆ. ದೇಶದ ಹಿತಕ್ಕಾಗಿ ಒಕ್ಕೂಟ ರಚನೆಯಾಗಿಲ್ಲ. ಇದು ಜನರಿಗೆ ಗೊತ್ತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಎಂದರು. ಇದನ್ನೂ ಓದಿ: ತೆಲಂಗಾಣದಲ್ಲಿ ಬಿಆರ್‌ಎಸ್ ಸೋಲು – ತನ್ನನ್ನು ತಾನೇ ಟ್ರೋಲ್ ಮಾಡಿಕೊಂಡ ಕೆಸಿಆರ್ ಪುತ್ರ
Advertisement
Advertisement
ರಾಜ್ಯದಲ್ಲಿ 28ರ ಗುರಿ ಇದೆ. 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಐದು ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡುತ್ತೇವೆ ಎಂಬ ನಿರೀಕ್ಷೆಯಿತ್ತು. ರಾಜಸ್ಥಾನ ಮತ್ತು ಛತ್ತೀಸ್‌ಗಢ ದೊಡ್ಡ ಸವಾಲ್ ಇತ್ತು. ನಾವು ಅಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಸರಳತೆಯಿಂದ ಐದು ಬಾರಿ ಬಿಜೆಪಿ ಗೆದ್ದಿದೆ. ಉತ್ತರ ಭಾರತದ ರಾಜ್ಯಗಳು ಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳನ್ನು ಪಡೆದಿದೆ. ಸಂಘಟನಾತ್ಮಕ, ನೇತೃತ್ವ ದಕ್ಷಿಣದ ಐದಾರು ರಾಜ್ಯಗಳಲ್ಲಿ ಕಡಿಮೆ ಇದೆ. ದಕ್ಷಿಣದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯುತ್ತಾ ಹೋಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ: ಸಿದ್ದರಾಮಯ್ಯ
Advertisement
Advertisement
ತೆಲಂಗಾಣದಲ್ಲಿ ಬಿಆರ್‌ಎಸ್ ವಿರುದ್ಧ ಬಿಜೆಪಿ ಜನಾಭಿಪ್ರಾಯ ರೂಪಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಇದು ಲಾಭ ಆಗಿದೆ. ಕಾಂಗ್ರೆಸ್ ಯಾವತ್ತೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಎರಡು ದಿನದಲ್ಲಿ ಇವಿಎಂ ಮಷಿನ್ (EVM Machine) ಸರಿ ಇಲ್ಲ ಎಂದು ವಾದಿಸಲು ಶುರುಮಾಡುತ್ತದೆ. ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಎಂದು ಹೇಳಿದರು. ಇದನ್ನೂ ಓದಿ: ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು: ಮೋದಿ