ನವದೆಹಲಿ: ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್ (RSS) ತಮ್ಮ ಆಕ್ರಮಣಕಾರಿ ದಾಳಿಗಳ ಮೂಲಕ ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿವೆ. ಆದ್ದರಿಂದ ಬಿಜೆಪಿ, ಆರ್‌ಎಸ್‌ಎಸ್ ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂಬುದಾಗಿ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಹೇಳಿದರು.
Advertisement
ದೆಹಲಿಯಲ್ಲಿಂದು (Newdelhi) ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಮತ್ತು ಆರ್‌ಎಸ್‌ಸ್ ನಮ್ಮ ಮೇಲೆ ಆಕ್ರಮಣಕಾರಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅವರ ದಾಳಿಯಿಂದ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಅವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ಅವರು ನನಗೆ ದಾರಿ ತೋರಿಸುತ್ತಿದ್ದಾರೆ. ಜೊತೆಗೆ ಏನು ಮಾಡಬಾರದು ಅನ್ನೋದರ ಬಗ್ಗೆಯೂ ತರಬೇತಿ ನೀಡುತ್ತಿದ್ದಾರೆ ಎಂದು ಕುಟಕುಕಿದರು.
Advertisement
Advertisement
ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಕೋವಿಡ್ ನಿಯಮ (Covid Rules) ಉಲ್ಲಂಘನೆಯಾಗುತ್ತದೆ, ಕೊರೊನಾ ಸೋಂಕು ಹರಡುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಆದರೆ ಬಿಜೆಪಿ ನಡೆಸುವ ರೋಡ್ ಶೋಗಳು, ಯಾತ್ರೆಗಳಿಂದ ಕೊರೊನಾ ಹರಡೋದಿಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!
Advertisement
ಬಿಜೆಪಿಯ (BJP) ಬಳಿ ಸಾಕಷ್ಟು ಹಣವಿದೆ. ಅವರು ಏನೇ ಮಾಡಿದ್ರೂ ಸತ್ಯದ ಜೊತೆಗೆ ಹೋರಾಟ ಮಾಡಿ ಗೆಲ್ಲೋದಕ್ಕೆ ಆಗೋದಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿಎಂ ಮುಖಾಂತರ ಕೊನೆಗೂ ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ!
ಇದೇ ವೇಳೆ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿ, ಪಕ್ಷಕ್ಕೆ ಪಾದಯಾತ್ರೆ ಯಶಸ್ವಿಯಾಗಿದೆ. ನಾನು ಆರಂಭದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸಾಮಾನ್ಯ ಯಾತ್ರೆಯಾಗಿ ತೆಗೆದುಕೊಂಡಿದ್ದೆ, ಆದ್ರೆ ನಿಧಾನವಾಗಿ ಜನರ ಭಾವನೆ, ಧ್ವನಿ ಎಲ್ಲವೂ ನನಗೆ ಅರ್ಥವಾಯಿತು. ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ, ನಮ್ಮೊಂದಿಗೆ ಸೇರುವ ಯಾರನ್ನೂ ನಾವು ತಡೆಯುವುದಿಲ್ಲ ಎಂದು ಭಾವುಕರಾದರು.