ಚಾಮರಾಜನಗರ: ನಾವು ಅಣ್ಣ-ತಮ್ಮಂದಿರಂತೆ ಇರಬೇಕು. ಆದರೆ ಹಾಗೆ ಇರಲು ಬಿಜೆಪಿ, ಆರ್‌ಎಸ್‌ಎಸ್ ಬಿಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾತೆತ್ತಿದ್ದರೆ ನಾವು ರಾಷ್ಟ್ರಭಕ್ತರು ಎನ್ನುತ್ತಾರೆ. ಆದರೆ ಇವರು ರಾಷ್ಟ್ರದ್ರೋಹಿಗಳು. ಸಂವಿಧಾನ ಉಳಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಹಿಜಾಬ್, ಹಲಾಲ್, ಆಜಾನ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ. ಇವರ ವೈಫಲ್ಯ ಮುಚ್ವಿಕೊಳ್ಳಲು ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ. ಹಿಂದೂ ಓಟನ್ನು ಕೇಂದ್ರೀಕೃತ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ನಮ್ಮದು ಒಂದು ಧರ್ಮದ ರಾಷ್ಟ್ರವಲ್ಲ. ನಾವು ಅಣ್ಣ-ತಮ್ಮಂದಿರ ರೀತಿ ಇರಬೇಕು. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಹಾಗೆ ಇರಲು ಬಿಡುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾವ ರಾಜ್ಯದಲ್ಲಿ 150 ಸೀಟು ಗೆಲ್ತೀರಾ – ಕಾಂಗ್ರೆಸ್‍ಗೆ ಕುಟುಕಿದ ಕೋಟ ಶ್ರೀನಿವಾಸ ಪೂಜಾರಿ
Advertisement
Advertisement
ಹುಬ್ಬಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂದು ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿ, ಹುಬ್ಬಳಿಯಲ್ಲಿ ಪೋಸ್ಟ್ ಮಾಡಿದವನು ಯಾರು? ಆತ ಈಗ ಅರೆಸ್ಟ್ ಆಗಿದ್ದಾನೆ. ಆತ ಭಜರಂಗದಳದ ಕಾರ್ಯಕರ್ತ. ಆ ಗಲಾಟೆಯನ್ನು ಮೊದಲು ಹುಟ್ಟಾಕಿದ್ದು ಯಾರು? ಆ ಮೇಲೆ ಗಲಾಟೆಯಾಗಿದೆ. ಗಲಾಟೆ ಹುಟ್ಟಾಕಿದ್ದು ಭಜರಂಗದಳವನು. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಗಲಾಟೆ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲ್ಲಿ, ಶಿಕ್ಷೆ ಕೊಡಲಿ. ಆದರೆ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸುಳ್ಳು ಹೇಳುತ್ತಿದೆ. ಅವರ ಭ್ರಷ್ಟಾಚಾರ ಹಾಗೂ ತಪ್ಪುಗಳನ್ನು ಮುಚ್ವಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟರು. ಅವರಿಬ್ಬರು ನಮ್ಮ ಪಕ್ಷದವರ? ಇವುಗಳನ್ನ ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.
Advertisement
ನಾನು 45 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನೋಡಿದ ಭ್ರಷ್ಟ ಸರ್ಕಾರ, ವಿಷ ಬೀಜ ಬಿತ್ತುವಂತ ಸರ್ಕಾರ ಇದು. ಇಂತಹ ಸರ್ಕಾರವನ್ನ ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ. ಕಂಟ್ರಾಕ್ಟರ್ ಅಸೋಸಿಯೇಷನ್ ಅವರು ಪತ್ರ ಬರೆದಿದ್ದು ಇದೇ ಮೊದಲು. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ನಮ್ಮದು 10 ಪರ್ಸೆಂಟ್ ಸರ್ಕಾರ ಅಂತ ಪ್ರಧಾನಿ ಇಲ್ಲಿ ಬಂದು ಆರೋಪ ಮಾಡಿದ್ದರು. ದಾಖಲಾತಿ ಇದ್ದರೆ ತನಿಖೆ ಮಾಡಿಸಿ ಅಂತ ಹೇಳಿದ್ದೆ. ಕೆಂಪಣ್ಣ ಬರೆದಿರುವ ಪತ್ರ ವಿಚಾರವಾಗಿ ಪ್ರಧಾನಿಗೆ ಧಮ್ ಇದ್ರೆ ತನಿಖೆ ಮಾಡಿಸಲಿ. ಇವರು ಸುಮ್ಮನೆ ಕುಳಿತಿದ್ದಾರೆ ಅಂದರೆ, ಇವರ ಕುಮ್ಮಕ್ಕು ಇದೆ ಅಂತ ಅರ್ಥ ಎಂದು ಆರೋಪಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ, ಇದನ್ನೂ ಬಿಚ್ಚಿಡಲಿ: ಡಿಕೆಶಿ
Advertisement
ಆಂಟಿ ಕರಪ್ಷನ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿ ಈಶ್ವರಪ್ಪನನ್ನು ಜೈಲಿಗೆ ಕಳುಹಿಸಬೇಕು. ಈಶ್ವರಪ್ಪರಿಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನು. ಬೇರೆಯವರು ಈ ಕೆಲಸ ಮಾಡಿದ್ದರೆ ಬಿಡ್ತಿದ್ರಾ? ಅವರನ್ನು ಒಳಗೆ ಹಾಕುತ್ತಿದ್ದರು. ನಾವು ಬೇರೆ ಏನನ್ನೂ ಕೇಳುತ್ತಿಲ್ಲ, ಕಾನೂನು ಕ್ರಮವನ್ನಷ್ಟೆ ಕೇಳುತ್ತಿದ್ದೇವೆ. ಸಂತೋಷ್ ಪಾಟೀಲ್ ಹೆಂಡತಿಗೆ ಒಂದು ಕೋಟಿ ಪರಿಹಾರ ಕೊಡಬೇಕು. ಆಕೆ ಬಿಎ ಓದಿದ್ದಾಳೆ. ಆಕೆಗೆ ಸರ್ಕಾರಿ ಕೆಲಸ ಕೊಡಬೇಕು. ಇದು ನಮ್ಮ ಡಿಮ್ಯಾಂಡ್ ಎಂದು ಸ್ಪಷ್ಟಪಡಿಸಿದರು.