ಬಾಗಲಕೋಟೆ: ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಗಲಾಟೆ ನಡೆದಿದ್ದು, ಈ ಜಗಳಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಐವರ ಮೇಲೆ ಪೊಲೀಸರ ಸಮ್ಮುಖದಲ್ಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ನಡೆಸುವ ಸಿಸಿಟಿವಿ ಫೂಟೇಜ್ ಸಿಕ್ಕಿದ್ದು, ಇದ್ರಿಂದ ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಖಾತರಿಯಾಗಿದೆ.
ಹಾಕಿ ಸ್ಟಿಕ್ ಹಾಗೂ ಬಡಿಗೆಗಳನ್ನ ತೆಗೆದುಕೊಂಡ ಬಂದ ಗೂಂಡಾಗಳು, ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಗೆ ನುಗ್ಗಿ, ಚುನಾವಣಾ ಅಧಿಕಾರಿ ಎ.ಬಿ ಚಳಗೇರಿ, ಸೇರಿದಂತೆ ಮೂವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಸಾಲದೆಂಬಂತೆ ಸ್ಥಳಕ್ಕಾಗಿಮಿಸಿದ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ಗೆ ಕಲ್ಲು ತೂರಿ ಬೆನ್ನಿಗೆ ಗಾಯಗೊಳಿಸಿದ್ದಾರೆ. ಅವರ ಕಾರನ್ನ ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಈ ಸಿಸಿಟಿವಿ ವಿಡಿಯೋ ನೋಡಿದ್ರೆ, ಈ ಕೃತ್ಯ ಪೂರ್ವ ನಿಯೋಜಿತ ವಾಗಿದ್ದಲ್ಲದೇ, ಪ್ರಾಣ ಹಾನಿ ಮಾಡುವ ಉದ್ದೇಶದಿಂದ ಬಂದಿದ್ರು ಎಂಬ ಅನುಮಾನ ಮೂಡುತ್ತದೆ.
ಸದ್ಯ ಪ್ರಕರಣ ಸಂಬಂಧ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv