ಕಾರವಾರ: ಸ್ವಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್‍ಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದದಿಂದ ಬೈದು ನೂಕಾಡಿ ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಘಟನೆ ಬನವಾಸಿಯ ಅಜ್ಜರಣಿ ಗ್ರಾಮದಲ್ಲಿ ನಡೆದಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೀವೇ ಕಾರಣರಾದವರು. ಈ ಹಿಂದೆ ಬಿಜೆಪಿ ತೆಗಳಿ ಈಗ ಆಡಿದ ಮಾತು ಉಳಿಸಿಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರು ಜರೆದ್ರು. ಇತ್ತ ಕಾಂಗ್ರೆಸ್ ಕಾರ್ಯಕರ್ತರೇನು ಸುಮ್ನೆ ಇರಲಿಲ್ಲ. ಬಿಜೆಪಿಗೆ ಹೋದ ನಿಮಗೆ ಹೇಗೆ ವೋಟ್ ಕೊಡೋದು ಎಂದು ತರಾಟೆ ತೆಗೆದುಕೊಂಡರು.
Advertisement
Advertisement
ಕಳೆದ ಬಾರಿ ಕಾಂಗ್ರೆಸ್ಸಿನಲ್ಲಿದ್ದಾಗ ಬಿಜೆಪಿಯವರ ಬಗ್ಗೆ ಏನೂಂತ ಭಾಷಣ ಮಾಡಿದ್ದೀರಿ. ಇಂದು ಅದನ್ನು ಉಳಿಸಿಕೊಳ್ಳೋದನ್ನು ಕಲಿತುಕೊಳ್ಳಿ. ನಿಮ್ಮ ಸ್ವಾರ್ಥಕ್ಕೋಸ್ಕರ ನೀವು ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಮಾಧಾನ ಪಡಿಸಲು ಹೆಬ್ಬಾರ್ ಯತ್ನಿಸಿ ಕೊನೆಗೆ ಪರಿಸ್ಥಿತಿಯ ತೀವ್ರತೆ ಅರಿತು ಗ್ರಾಮದಿಂದ ಹೊರ ನಡೆದಿದ್ದಾರೆ.
Advertisement
ಹೆಬ್ಬಾರ್ ಹೇಳಿದ್ದೇನು?
ಯಲ್ಲಾಪುರ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಅವರು ಹೆಬ್ಬಾರ್ ನಾಲಾಯಕ್ ಎಂದ ಹೇಳಿಕೆಯನ್ನು ಪ್ರಸ್ತಾಪಿಸಿ, ಹಿರಿಯ ನಾಯಕರಾದವರಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, ನೀವು ನಿಮ್ಮ ನಾಲಿಗೆಯನ್ನ ಹರಿಬಿಟ್ಟರೇ ನಾನು ನನ್ನ ನಾಲಿಗೆಯನ್ನ ಹರಿಬಿಡುತ್ತೇನೆ. ಪಕ್ಷಾಂತರದ ಬಗ್ಗೆ ದೇಶಪಾಂಡೆ, ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ದೇಶಪಾಂಡೆ ಇಡೀ ಜಿಲ್ಲೆಯ ಜನರ ಕ್ಷಮೆ ಕೇಳಬೇಕು. ಕಳೆದ ಬಾರಿ ಸತೀಶ್ ಸೈಲ್, ಶಾರದ ಶೆಟ್ಟಿ, ಮಂಕಾಳು ವೈದ್ಯ ಯಾಕೆ ಸೋತರು ಅನ್ನೋದು ಗೊತ್ತು, ಅಧಿಕಾರಿಗಳನ್ನ ಇಟ್ಟುಕೊಂಡು ದೇಶಪಾಂಡೆ ದಬ್ಬಾಳಿಕೆ ಮಾಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.