ಬೆಂಗಳೂರು: ಬಿಜೆಪಿ ಸರ್ಕಾರ ಅವಧಿಯ 40% ಕಮಿಷನ್ ಆರೋಪದ ಬಗ್ಗೆ ನ್ಯಾ.ನಾಗಮೋಹನ್ ದಾಸ್ ವರದಿ ಕೊಟ್ಟ ಬೆನ್ನಲ್ಲೇ ರಾಜಕೀಯ ಆರೋಪ ಪ್ರತ್ಯಾರೋಪ ಜೋರಾಗ್ತಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ 60% ಕಮಿಷನ್ ಆರೋಪದ ಪೋಸ್ಟರ್ ವಿಡಿಯೋ ಬಿಡುಗಡೆ ಮಾಡಿದೆ. ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಿಯಲ್ಲಿ ದಾಖಲೆಯ ಕೆಎಂಎಫ್ ತುಪ್ಪ ರವಾನೆ – ಯುಗಾದಿಗಾಗಿ ತುರ್ತು 2 ಸಾವಿರ ಟನ್‌ಗೆ ಡಿಮ್ಯಾಂಡ್
All Day,all night – Just Loot it !!#HalalSarkara #CommissionSarkara #60PercentSarkara pic.twitter.com/hYugjcoG3H
— BJP Karnataka (@BJP4Karnataka) March 13, 2025
ಎಐ ತಂತ್ರಜ್ಞಾನ ಬಳಸಿ ಸಿಎಂ ಸಿದ್ದರಾಮಯ್ಯ ಸ್ಕೆಚ್ ಇರುವ Just Loot it flat 60% ಕಮಿಷನ್ ಎಂಬ ಪೋಸ್ಟರ್ ವಿಡಿಯೋ ಬಿಡುಗಡೆ ಮಾಡಿದೆ.
ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ 60% ಕಮಿಷನ್ ಆರೋಪ ಮಾಡಿದ್ದು, 40% ಕಮಿಷನ್ ಆರೋಪದ ಆಯೋಗದ ವರದಿಗೆ ತಿರುಗೇಟು ಕೊಟ್ಟಿದೆ. ಆಲ್ ಡೇ. ಆಲ್ ನೈಟ್.. ಜಸ್ಟ್ ಲೂಟ್ ಇಟ್ ಎಂಬ ಸ್ಲೋಗನ್ ಹಾಕಿ ಕಾಂಗ್ರೆಸ್ ವಿರುದ್ಧ 60% ಕಮಿಷನ್ ಆರೋಪ ಮಾಡಿದೆ.