ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ (BJP) ಕಲೆಕ್ಷನ್ ಮಾಸ್ಟರ್ ಆರೋಪ ಹೊರಿಸಿದೆ. ವಲಯವಾರು ಹಣ ಕಲೆಕ್ಷನ್ ಮಾಡಿ ಕಾಂಗ್ರೆಸ್ ಹೈಕಮಾಂಡ್‍ಗೆ ಕೊಡುತ್ತಿದೆ ಬಿಜೆಪಿ ಆರೋಪಿಸಿದೆ.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ (Sadananda Gowda) ಸುದ್ದಿಗೋಷ್ಠಿ ನಡೆಸಿ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ರಿಲೀಸ್ ಮಾಡಿದ್ದಾರೆ. ಸುರ್ಜೇವಾಲಾಗೆ ಸಿಎಂ ಮತ್ತು ಪುತ್ರ ಯತೀಂದ್ರ ಕಲೆಕ್ಷನ್ ಕಲೆಕ್ಟ್ ಮಾಡಿ ಕೊಡುತ್ತಾರೆ. ವೇಣುಗೋಪಾಲ ಅವರಿಗೆ ಡಿಕೆಶಿ ಕಲೆಕ್ಷನ್ ಸಂಗ್ರಹಿಸಿ ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಗುಂಪುಗಳಿಗೆ ಅವರರವರ ಬಣದ ಗುತ್ತಿಗೆದಾರರು ಕಮೀಷನ್ ಸಂಗ್ರಹಿಸಿ ಕೊಡ್ತಿದ್ದಾರೆ. ಸಂಗ್ರಹ ಮಾಡಿದ ಎಲ್ಲಾ ಹಣ ಕೊನೆಗೆ ರಾಹುಲ್ ಗಾಂಧಿ ಅವರಿಗೆ ಹೋಗುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಅಣ್ವಸ್ತ್ರಗಳು ಎಲ್ಲಾ ಮುಸ್ಲಿಮರಿಗೆ ಸೇರಿದ್ದು: ಷರಿಫ್ ಅಳಿಯ
Advertisement
ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್ನ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿ ಹೋಗಿದ್ದಾರೆ.@INCKarnataka ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್ ಕಾರ್ಡ್ ಇಂತಿದೆ.
▪️ಬಿಡಿಎ – ₹50 ಕೋಟಿ
▪️ಬಿಡಬ್ಲೂಎಸ್‌ಎಸ್‌ಬಿ – ₹45 ಕೋಟಿ…
— BJP Karnataka (@BJP4Karnataka) October 20, 2023
Advertisement
ಇಂದಿರಾ ಕ್ಯಾಂಟಿನ್‍ಗಳಿಗೂ ಹಣ ಬಿಡುಗಡೆಯಾಗುತ್ತಿಲ್ಲ. ಯಾಕೆಂದರೆ ಅವರು ಕಮಿಷನ್ ಕೊಡುತ್ತಿಲ್ಲ. ಅದಕ್ಕಾಗಿ ಅವರಿಗೆ ಹಣ ಬಿಡುಗಡೆ ಮಾಡಿಲ್ಲ. ದಸರಾ ಕಾರ್ಯಕ್ರಮಕ್ಕೆ ಕಲಾವಿದರಿಂದಲೂ ಕಮಿಷನ್ ಕೇಳಿದ್ದಾರೆ. ಡಿಕೆಶಿ ಅವರ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ವಿಚಾರಕ್ಕೆ ಕೋರ್ಟ್ ವಿಚಾರಣೆಗೆ ಅನುಮತಿ ನೀಡಿದೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
Advertisement
ATM ಸರ್ಕಾರದ ಕಲೆಕ್ಷನ್ ವಂಶಾವಳಿ. ಅಡಿಯಿಂದ ಮುಡಿಯವರೆಗೆ ಭ್ರಷ್ಟರದ್ದೇ ಪ್ರಭಾವಳಿ.
Collection Tree of ATM Sarkara!#CongressLootsKarnataka pic.twitter.com/kFoRwVPOzt
— BJP Karnataka (@BJP4Karnataka) October 20, 2023
Advertisement
ಟ್ವಿಟ್ಟರ್‍ನಲ್ಲಿ ಕಾರ್ಟೂನ್ ಹಂಚಿಕೊಂಡಿರುವ ಬಿಜೆಪಿ, ಕರ್ನಾಟಕದ ಜನತೆಯ ಶ್ರಮದ ದುಡಿಮೆಯ ಹಣವನ್ನು ಲೂಟಿ ಮಾಡುತ್ತಿದೆ. ಅದನ್ನು ಕಲೆಕ್ಷನ್ ಮಾಸ್ಟರ್‍ಗಳು ಹೈಕಮಾಂಡ್‍ಗೆ ತಲುಪಿಸುತ್ತಿದ್ದಾರೆ. ಸಿಎಂ ಎಂದರೆ ಕಲೆಕ್ಷನ್ ಮಾಸ್ಟರ್ ಎಂದು ವ್ಯಂಗ್ಯವಾಡಿದೆ. ಕಲೆಕ್ಷನ್ ಮಾಸ್ಟರ್ ನೇಮ್ ಪ್ಲೇಟ್ ಹಾಕಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಗಳಲ್ಲೂ ಕಮೀಷನ್ ವಸೂಲಿ ಮಾಡುತ್ತಿದೆ. ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್ನ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್ ಕಾರ್ಡ್‍ನ್ನು ಬಿಡುಗಡೆ ಮಾಡಿದ್ದೇವೆ ಎಂದು ಒಂದು ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬಿಡಿಎ – 50 ಕೋಟಿ ರೂ.
ಬಿಡಬ್ಲೂಎಸ್‍ಎಸ್‍ಬಿ – 45 ಕೋಟಿ ರೂ.
ಕೆಆರ್‌ಐಡಿಎಲ್ – 20 ಕೋಟಿ ರೂ.
ಕಿಯೋನಿಕ್ಸ್ – 15 ಕೋಟಿ ರೂ.
ಕರ್ನಾಟಕ ಉಗ್ರಾಣ ನಿಗಮ – 12 ಕೋಟಿ ರೂ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – 10 ಕೋಟಿ ರೂ.
ಇಷ್ಟೇ ಅಲ್ಲದೇ ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್‍ಗಳಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್ ಆಗುವ ಸಾಧ್ಯತೆ ಇದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: ಪರಶುರಾಮ ಮೂರ್ತಿ ಫೈಬರ್ ಅಲ್ಲ ಕಂಚು- ಬಿಜೆಪಿಯಿಂದ ವೀಡಿಯೋ ಬಿಡುಗಡೆ
Web Stories