ಬೆಂಗಳೂರು: ಬಿಜೆಪಿಯವರು (BJP) ಚುನಾವಣೆ ಗೆಲ್ಲೋದಕ್ಕೆ ಯಾರನ್ನ ಬೇಕಾದ್ರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ರೌಡಿ ಶೀಟರ್ ಸೈಲೆಂಟ್ ಸುನೀಲ (Silent Sunila) ಬಿಜೆಪಿ ಸದಸ್ಯತ್ವ ಪಡೆದಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ಎಚ್ಚರಿಕೆ
ಬಿಜೆಪಿಯವರು ವೇದಿಕೆ ಮೇಲೆ ಮಾತ್ರ ನೈತಿಕತೆಯ ಭಾಷಣ ಮಾಡೋದು. ವಸ್ತು ಸ್ಥಿತಿ ಬೇರೆ ಇದೆ. ಬಿಜೆಪಿಯವರು ಗೆಲ್ಲೋದಕ್ಕೆ ಏನು ಬೇಕಾದ್ರು ಮಾಡ್ತಾರೆ, ಯಾರನ್ನ ಬೇಕಾದ್ರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ
ಸೈಲೆಂಟ್ ಸುನೀಲ, ಫೈಟರ್ ರವಿ, ಸ್ಯಾಂಟ್ರೋ ರವಿ (Santro Ravi) ಇಂತಹವರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಾರೆ. ಅವರಿಗೆ ಚುನಾವಣೆ ಗೆಲ್ಲಬೇಕು ಅನ್ನೋದಷ್ಟೇ ಉದ್ದೇಶ. ಅದಕ್ಕೆ ಏನು ಬೇಕಾದ್ರು ಮಾಡ್ತಾರೆ. ಈ ಬಾರಿ ಚುನಾವಣೆಯಲ್ಲಿ ಜನರೇ ಇದಕ್ಕೆಲ್ಲ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.