ಬೆಂಗಳೂರು: ತಮಿಳುನಾಡು ರಾಜ್ಯದ ರಾಜಕೀಯದ ಪ್ರಭಾವ ಕರ್ನಾಟಕದಲ್ಲೂ ಕಾಣುತ್ತಿದೆ. ಇತ್ತೀಚಿಗೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ಪಕ್ಷದ ಕೆಲ ಕಾರ್ಯಕರ್ತರು ನಯ, ವಿನಯ, ಭಯ, ಭಕ್ತಿಯಿಂದ ನಮಸ್ಕರಿಸುವುದು ಕಂಡುಬಂದಿದೆ.
ಕಾಲಿಗೆ ನಮಸ್ಕರಿಸುವ ಪದ್ಧತಿ ತಮಿಳುನಾಡು ರಾಜಕೀಯದಲ್ಲಿ ಬಹುದಿನಗಳಿಂದ ನಡೆದುಕೊಂಡು ಬಂದಿದೆ. ದಿ. ಜಯಲಲಿತಾ ಅವರ ಕಾಲಿಗೆ ಪಕ್ಷದ ನಾಯಕರು ಸೇರಿದಂತೆ ಕಾರ್ಯಕರ್ತರು ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಜಯಲಲಿತಾರ ಕಾಲವಾದ ನಂತರ ಚಿನ್ನಮ್ಮ ಶಶಿಕಲಾರಿಗೆ ನಮಸ್ಕರಿಸುವುದು ಮುಂದುವರೆದಿತ್ತು.
ಇದೀಗ ಕರ್ನಾಟಕದಲ್ಲೂ ಈ ಸಂಸ್ಕೃತಿ ಮುಂದುವರೆದಿದ್ದು, ರಾಜ್ಯದ ಪ್ರಭಾವಿ ನಾಯಕ ಬಿಎಸ್‍ವೈ ಅವರ ಕಾಲಿಗೆ ಕಾರ್ಯಕರ್ತರು ನಮಸ್ಕರಿಸುತ್ತಿದ್ದಾರೆ. ಆದ್ರೆ ಈ ಸಂಸ್ಕೃತಿ ಬೇಕಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ. ಇದನ್ನು ಗಮನಿಸಿದರೆ ಬಿಎಸ್‍ವೈ ಅವರ ರಾಜಕೀಯ ಜೀವನ ಜಯಲಲಿತಾ ಹಾಗೂ ಶಶಿಕಲಾರಂತೆ ಸಾಗುತ್ತಿರುವಂತೆ ಕಾಣಿಸುತ್ತಿದೆ.