ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಿಜೆಪಿ, ಒಂದು ಕಾಂಗ್ರೆಸ್ ಮತ್ತು ಒಂದು ಕೆಪಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾವೇರಿ ಎಂಜನಿಯರಿಂಗ್ ಕಾಲೇಜು ಆವರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದ್ರು.
Advertisement
Advertisement
ಹಾವೇರಿಯಲ್ಲಿ ಬಿಜೆಪಿ ನೆಹರು ಓಲೇಕಾರ, ಶಿಗ್ಗಾಂವಿ-ಸವಣೂರು ಬಸವರಾಜ್ ಬೊಮ್ಮಾಯಿ, ಹಾನಗಲ್ ಸಿ.ಎಂ.ಉದಾಸಿ, ಹಾಗೂ ಬ್ಯಾಡಗಿಯಲ್ಲಿ ವಿರುಪಾಕ್ಷಪ್ಪ ಬಳ್ಳಾರಿ ಜಯಗಳಿಸಿದ್ದಾರೆ. ಅಲ್ಲದೆ ಹಿರೆಕೆರೂರು ಕ್ಷೇತ್ರದಲ್ಲಿ ನಟ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ, ಕೆಪಿಜೆಪಿ ಅಭ್ಯರ್ಥಿ ಆರ್. ಶಂಕರ್ ಗೆಲುವಿನ ಪತಾಕೆ ಹಾರಿಸಿದ್ದು, ಒಟ್ಟಿನಲ್ಲಿ ಹಾವೇರಿಯಲ್ಲಿ ಬಹುತೇಕ ಕೇಸರಿಮಯವಾಗಿದೆ.