Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

Dakshina Kannada

ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

Public TV
Last updated: February 13, 2019 7:38 am
Public TV
Share
2 Min Read
NALIN
SHARE

ಮಂಗಳೂರು: ಲೋಕಸಭಾ ಚುನಾವಣೆಗೆ ಕಸರತ್ತು ಆರಂಭಗೊಂಡಿರುವಾಗಲೇ ಕರಾವಳಿಯಲ್ಲಿ ಹಾಲಿ ಸಂಸದರ ಬದಲಾವಣೆಗೆ ಒತ್ತಡ ಕೇಳಿಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಗೆದ್ದು ಬಂದಿರುವ ಬಿಜೆಪಿಗೆ ಈ ಬಾರಿಯೂ ಮೋದಿ ಅಲೆಯ ಖಾತರಿ ಇದೆ. ಮತದಾರರು ಮೋದಿ ಕೈ ಹಿಡೀತಾರೆಂಬ ಭರವಸೆಯಲ್ಲೇ ಬಿಜೆಪಿ ನಾಯಕರಿದ್ದಾರೆ. ಆದರೆ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೆಂಬ ಕೂಗು ಪಕ್ಷದ ಒಳಗೆಯೇ ಕೇಳಿಬಂದಿದೆ. ನಳಿನ್ ಬದಲು ಬೇರೊಬ್ಬ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಬಿಜೆಪಿ ಕಾರ್ಯಕರ್ತರೇ ಒತ್ತಡ ಹೇರುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

ಪ್ರಧಾನಿ ಮೋದಿ ಬಗ್ಗೆ ಜಿಲ್ಲೆಯ ಮತದಾರರಲ್ಲಿ ಒಲವು ಇದ್ದರೂ, ಸಂಸದ ನಳಿನ್ ಕುಮಾರ್ ಬಗ್ಗೆ ಅಸಮಾಧಾನ ಇದೆ. ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆ ಬಿದ್ದಿರುವುದು ಹಾಗೂ ಜನರ ಸಮಸ್ಯೆಗೆ ಸ್ಪಂದಿಸದಿರುವುದು ನಳಿನ್ ಮೇಲಿನ ಆರೋಪವಾಗಿದೆ. ಲೋಕಸಭೆಯಲ್ಲಿ ಕರಾವಳಿಯ ಸಮಸ್ಯೆ ಬಗ್ಗೆ ಹೇಳಿಕೊಳ್ಳಲಾಗದ ಸಂಸದನೆಂದು ಆರೋಪಿಸುವ ಮಂದಿ ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕೆಂಬ ಕೂಗು ಕೇಳಿಬಂದಿದೆ.

NALIN KUMAR

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಗಾಗಲೇ ಆರ್‍ಎಸ್‍ಎಸ್ ಪ್ರಮುಖರು ಬೈಠಕ್ ನಡೆಸಿದ್ದಾರೆ. ನಳಿನ್ ಹೆಸರು ಬದಲಾದರೆ, ಬೇರೆ ಯಾರು ಅನ್ನುವ ವಿಚಾರದಲ್ಲಿ ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಪ್ರಬಲವಾಗಿ ಕೇಳಿ ಬರುತ್ತಿರುವುದು ಸತ್ಯಜಿತ್ ಸುರತ್ಕಲ್ ಹಾಗೂ ಇನ್ನೂ ಎರಡು ಮೂರು ಹೆಸರು.

ಸತ್ಯಜಿತ್ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು. ಅಲ್ಲದೆ ಕರಾವಳಿಯಲ್ಲಿ ಪ್ರಬಲವಾಗಿರುವ ಸಮುದಾಯಕ್ಕೆ ಸೇರಿದವರು. ಸತ್ಯಜಿತ್ ಎರಡೂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಇವರ ಪರವಾಗಿ ಈಗಾಗಲೇ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದು, ತಮ್ಮದೇ ಶೈಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ತಿಪ್ಪೇಶ್ ಹೇಳಿದ್ದಾರೆ.

TIPPESH e1550023537259
ಸಂಸದ ನಳಿನ್ ಕುಮಾರ್ ಎರಡು ಬಾರಿ ಸಂಸದರಾದ್ರೂ, ಲೋಕಸಭೆಯಲ್ಲಿ ಮಿಂಚಲು ಸಾಧ್ಯವಾಗಿಲ್ಲ. ಸಚಿವರಾಗುವ ಅವಕಾಶ ಬಂದಿದ್ದರೂ ತಾನೇ ನಿರಾಕರಿಸಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಆದ್ರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕರ್ನಾಟಕದಲ್ಲಿ ಯಾವುದೇ ಹಾಲಿ ಸಂಸದರನ್ನು ಬದಲಾಯಿಸುವ ಬಗ್ಗೆ ಇನ್ನೂ ಸುಳಿವು ನೀಡಿಲ್ಲ.

ಹಿಂದೊಮ್ಮೆ ನಳಿನ್ ಮತ್ತು ಶೋಭಾರನ್ನು ರಾಜ್ಯ ರಾಜಕಾರಣಕ್ಕೆ ಹೋಗುವಂತೆ ತಿಳಿಸಿದ್ದರೂ ಅದು ಕಾರ್ಯಗತ ಆಗಿಲ್ಲ. ಈ ನಡುವೆ ಆರ್‍ಎಸ್‍ಎಸ್ ನಾಯಕರು ಮಾತ್ರ ಸಂಸದನ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ಎರಡು ಬಾರಿಯ ಸಂಸದ ನಳಿನ್ ಕುಮಾರ್ ಬದಲಿಗೆ ಯಾರು ಆ ಸ್ಥಾನವನ್ನು ತುಂಬಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

NALIN KUMAR KATEEL e1550023580419
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:dakshina kannadloksabha election 2019Mangalurunalinkumar kateelPublic TVsatyajith surathkalದಕ್ಷಿಣ ಕನ್ನಡನಳಿನ್ ಕುಮಾರ್ ಕಟೀಲ್ಪಬ್ಲಿಕ್ ಟಿವಿಮಂಗಳೂರುಲೋಕಸಭಾ ಚುನಾವಣೆ 2019ಸತ್ಯಜಿತ್ ಸುರತ್ಕಲ್
Share This Article
Facebook Whatsapp Whatsapp Telegram

Cinema news

Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories

You Might Also Like

Mallikarjuna Mutya 3
Court

ಬಾಲಕಿ ಜೊತೆ ಅನುಚಿತ ವರ್ತನೆ – ಪ್ರಕರಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

Public TV
By Public TV
13 minutes ago
Ganiga Ravikumar
Districts

2028 ಕ್ಕೂ ಕಾಂಗ್ರೆಸ್ ಬರಬೇಕು, ಅದಕ್ಕಾಗಿ ಹೈಕಮಾಂಡ್ ಕುರ್ಚಿ ಗೊಂದಲ ಬಗೆಹರಿಸಬೇಕು: ಗಣಿಗ ರವಿಕುಮಾರ್

Public TV
By Public TV
29 minutes ago
Bengaluru Jalahalli Theft
Bengaluru City

ಚಿನ್ನದ ಬೆಲೆ ಏರಿಕೆ – ಪೊಲೀಸರ ಮನೆಯನ್ನೂ ಬಿಡದೇ ಕೈಚಳಕ ತೋರಿಸಿದ ಖತರ್ನಾಕ್ ಕಳ್ಳರು

Public TV
By Public TV
37 minutes ago
subbareddy 1
Bengaluru City

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ 

Public TV
By Public TV
51 minutes ago
Pakistan Strikes
Latest

Afghanistan-Pakistan conflict | ಪಾಕ್‌ನ F-16 ಜೆಟ್‌ ಉಡೀಸ್‌ – ಬಹಿರಂಗ ಯುದ್ಧ ಘೋಷಿಸಿದ ಶೆಹಬಾಜ್ ಷರೀಫ್‌

Public TV
By Public TV
52 minutes ago
O Panneerselvam
Latest

ತಮಿಳುನಾಡು ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ – 3 ಬಾರಿ ಸಿಎಂ ಆಗಿದ್ದ ಪನ್ನೀರ್‌ಸೆಲ್ವಂ ಡಿಎಂಕೆ ಸೇರ್ಪಡೆ

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?