ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿವ ದರ್ಶನ ಬಾರದ ಮಾಜಿ ಸಂಸದೆ, ನಟಿ ರಮ್ಯಾಗೆ ಅವರಿಗೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ನೀವು ನಮ್ಮ ಸಹೋದರಿಯಂತೆ. ಈಗಲಾದರೂ ಅಂಬರೀಶ್ ಸಮಾಧಿ ಬಳಿ ಬಂದು ವಂದಿಸಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಎಂದು ಉಪ್ಪರಕನಹಳ್ಳಿ ಗ್ರಾಮದ ಶಿವಕುಮಾರ್ ಆರಾಧ್ಯ ಎಂಬವರು ಅಂಬಿ ದರ್ಶನಕ್ಕೆ ಬಾರದ ರಮ್ಯಾ ವಿರುದ್ಧ ವ್ಯಂಗ್ಯ ಮಾತನಾಡಿದ್ದಾರೆ. ಅಲ್ಲದೇ ಸಹೋದರಿ ತಪ್ಪು ಮಾಡಿದಾಗ ಬೈದು ಹೊಡೆದು ಬುದ್ದಿ ಹೇಳುವುದು ಸಹೋದರರ ಕರ್ತವ್ಯ. ಆದ್ದರಿಂದ ನೀವು ಮಾಡಿದ ತಪ್ಪು ತಿಳಿಸಿ ಬುದ್ದಿ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ
ವಿಡಿಯೋದಲ್ಲಿ ಏನಿದೆ?
ನಮಸ್ಕಾರ ರಮ್ಯಕ್ಕ. ಹಿಂದೆಲ್ಲಾ ನಾವು ನಿಮಗೆ ಬಾಡಿಗೆ ಸಹೋದರ ಎಂದು ಹೇಳಿ ವೈಯಕ್ತಿಕವಾಗಿ ತಮಾಷೆ ಮಾಡಿರಬಹುದು. ಆದರೆ ಈಗ ನಾನು ಬಾಡಿಗೆ ಸಹೋದರ ಎಂದು ತಮಾಷೆ ಮಾಡುವುದಿಲ್ಲ. ನಾನು ಈಗ ನಿಮ್ಮ ಬಳಿ ಗಂಭೀರವಾಗಿ ಸಲಹೆ ನೀಡುತ್ತಿದ್ದೇನೆ. ರಮ್ಯಕ್ಕ ನೀವು ಎಲ್ಲೋ ಒಂದು ಕಡೆ ತಪ್ಪು ಮಾಡುತ್ತಿದ್ದೀರಾ. ನಮ್ಮ ಹಳ್ಳಿ ಕಡೆಯಲ್ಲಿ ಯಾರಾದರೂ ತಪ್ಪು ಮಾಡಿದರೆ, ಅವರ ಅಣ್ಣ-ತಮ್ಮಂದಿರು ಬೈದು ತಲೆ ಮೇಲೆ ಹೊಡೆದು ಬುದ್ಧಿ ಹೇಳುತ್ತಾರೆ. ಇದನ್ನೂ ಓದಿ: ಮಾಜಿ ಸಂಸದೆ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv