ಚೆನ್ನೈ: ಕೇಂದ್ರದ ಹಿಂದಿ ಹೇರಿಕೆ ಯತ್ನಕ್ಕೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತೊಂದು ಮಜಲು ಮುಟ್ಟಿವೆ. ವೆಪ್ಪತ್ತೂರು ಟೌನ್ ಪಂಚಾಯತ್‍ನಲ್ಲಿ ಅಳವಡಿಸಲಾಗಿದ್ದ ಪ್ರಧಾನಿ ಮೋದಿ ಫೋಟೋವನ್ನು ಪಂಚಾಯತ್ ಅಧ್ಯಕ್ಷ ಅಂಜಮ್ಮಳ್ ತೆಗೆದುಹಾಕಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಫೋಟೋ ತೆಗೆದ ಬೆನ್ನಲ್ಲೇ ಬಿಜೆಪಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಪಂಚಾಯತ್ ಅಧ್ಯಕ್ಷರ ಕೃತ್ಯ ಖಂಡಿಸಿ ಬಿಜೆಪಿ ಪ್ರತಿಭಟನೆಗಳನ್ನು ನಡೆದಿದೆ. ಕುಂಬಕೋಣಮ್, ತಿರುವಿದೈ ಮರುತ್ತೂರ್‍ನಲ್ಲಿ ಪೊಲೀಸ್ ದೂರು ದಾಖಲಾಗಿದೆ. ಇದನ್ನೂ ಓದಿ: ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್ ರಾಜೀನಾಮೆ
Advertisement
We will not rest until we install a @BJP4TamilNadu Chief Minister in the land of Saint Thiruvalluvar.
Mark my words, every public building in Tamil Nadu will be adorned with the portrait of Prime Minister Shri @narendramodi. pic.twitter.com/0ZqkoUmoyJ
— C T Ravi ???????? ಸಿ ಟಿ ರವಿ (@CTRavi_BJP) April 14, 2022
Advertisement
ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಪಂಚಾಯತ್ ಸಿಬ್ಬಂದಿ ನಡೆದಿದ್ದ ಯಡವಟ್ಟನ್ನು ಸರಿಪಡಿಸಿದ್ದಾರೆ. ಮತ್ತೆ ಮೋದಿ ಫೋಟೋವನ್ನು ಅಳವಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳು ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವಂತಿಲ್ಲ, 30 ನಿಮಿಷಗಳಿಗೂ ಹೆಚ್ಚು ಲಂಚ್ ಬ್ರೇಕ್ ಇಲ್ಲ: ಯೋಗಿ
Advertisement
தஞ்சாவூர் வேப்பத்தூர் பஞ்சாயத்து அலுவலகத்தில் நேற்று பிரதமர் புகைப்படத்தை திமுகவினர் அகற்றிய நிலையில்,
இன்று பாஜக கவுன்சிலர் சந்திரசேகர்,மண்டல் தலைவர் ராஜேந்திரன் மற்றும் பாஜக நிர்வாகிகள் மீண்டும் அதே அலுவலகத்தில் பிரதமர் படத்தை முறைப்படி மகாத்மா காந்தி புகைப்படம் அருகே வைத்தனர் pic.twitter.com/Uwu7i5hSLI
— CTR.Nirmal kumar (@CTR_Nirmalkumar) April 13, 2022
Advertisement
ಬಿಜೆಪಿ ನಾಯಕ ಸಿಟಿಆರ್ ನಿರ್ಮಲ್ ಪ್ರತಿಕ್ರಿಯಿಸಿ, ನಿನ್ನೆ ತಂಜಾವೂರು ವೆಪ್ಪತ್ತೂರು ಪಂಚಾಯತ್ ಕಚೇರಿಯಲ್ಲಿ ಡಿಎಂಕೆ ಪ್ರಧಾನಿಯವರ ಫೋಟೋ ತೆಗೆದು ಹಾಕಿತ್ತು. ಇಂದು ಬಿಜೆಪಿ ಕೌನ್ಸಿಲರ್ ಚಂದ್ರಶೇಖರ್, ಮಂಡಲದ ಮುಖಂಡ ರಾಜೇಂದ್ರನ್ ಮತ್ತು ಬಿಜೆಪಿ ಕಾರ್ಯಕಾರಿಣಿಗಳು ಮತ್ತೆ ಅದೇ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರದ ಪಕ್ಕದಲ್ಲಿ ಪ್ರಧಾನಿಯವರ ಚಿತ್ರವನ್ನು ಅಳವಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.