ದಾವಣಗೆರೆ: ಬಿಜೆಪಿ ಅಂದ್ರೆ ಬ್ರಾಹ್ಮಣರ ಪಕ್ಷ ದಲಿತರು ಹಿಂದುಳಿದವರು ಅಲ್ಲಿ ಹೋಗ ಬೇಡಿ ಅಪಪ್ರಚಾರ ಮಾಡಲಾಗಿತ್ತು ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ಅಂದ್ರೆ ಬ್ರಾಹ್ಮಣರ ಪಕ್ಷ, ದಲಿತರು ಹಿಂದುಳಿದವರು ಅಲ್ಲಿ ಹೋಗಬೇಡಿ. ಅದು ಗರ್ಭಗುಡಿ ಸಂಸ್ಕೃತಿ ಪಕ್ಷ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು ಎಂದು ನಾರಾಯಣ ಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
Advertisement
ದಾವಣಗೆರೆ ನಗರದಲ್ಲಿರುವ ಶಾಮನೂರು ಶಿವಶಂಕರಪ್ಪ ಸಭಾಗಣದಲ್ಲಿ ನಡೆದ ಜನಶೀರ್ವಾದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಆರ್‍ಎಸ್‍ಎಸ್ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಹಿಂದುಳಿದ ಜನಾಂಗ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಿದೆ. ಇದು ಬಿಜೆಪಿ ಶಕ್ತಿ ಎಂದು ಆಕ್ರೋಶಭರಿತವಾಗಿ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಸಚಿವ ಸಂಪುಟದಲ್ಲಿ 22 ಜನ ಎಸ್‍ಸಿ, ಎಸ್ ಟಿ ಸಂಸದರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ
Advertisement
ಕೇಂದ್ರ ಸರ್ಕಾರ ಬಜೆಟ್ ಗಳಲ್ಲಿ ಶೇ.22 ರಷ್ಟು ಹಣ ಎನ್.ಜಿ.ಓಗಳಿಗೆ ಹೋಗುತ್ತದೆ. ಈ ಎನ್.ಜಿ.ಓಗಳನ್ನ ಬಿಜೆಪಿ ಆರ್.ಎಸ್.ಎಸ್ ಅಥವಾ ಡಿಎಸ್‍ಎಸ್ ನಡೆಸುತ್ತಿಲ್ಲ. ಈ ಎನ್.ಜಿ.ಓ ಗಳು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ. ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ನೇರ ಬೆಂಗಳೂರು ಮಾರ್ಗಕ್ಕೆ ಕೇಂದ್ರ ಒಪ್ಪಿದೆ. ಇದಕ್ಕಾಗಿ 925 ಕೋಟಿ ಹಣ ಕೇಂದ್ರ ಬಿಡುಗಡೆ ಮಾಡಿದೆ. ಶೇಖಡಾ 50 ರಷ್ಟು ಹಣ ರಾಜ್ಯ ಸರ್ಕಾರ ಕೊಡಬೇಕು. ಇಷ್ಟರಲ್ಲಿ ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಎ ನಾರಾಯಣ ಸ್ವಾಮಿ ತಿಳಿಸಿದರು.