– ರೈತರಿಗೆ ಆಲೂಗೆಡ್ಡಿಯಿಂದ ಚಿನ್ನ ಬೆಳೆಯೋದು ಹೇಗೆಂದು ಡಿಕೆಶಿ ಹೇಳಿಕೊಡಲಿ; ಲೇವಡಿ
ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿನಕ್ಕೊಂದು ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಇನ್ನೂ ಪೋಸ್ಟ್ ಮಾರ್ಟಂ (ಮರಣೋತ್ತರ ಪರೀಕ್ಷೆ – Post Mortem)ಗೂ ದರ ವಿಧಿಸಿಬಿಟ್ರೆ ಜನ ಸಾಯೋದಕ್ಕೂ ಹಿಂಜರಿಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಟೆಂಡರ್‌ಗಳಲ್ಲಿ ಅಕ್ರಮ ಆರೋಪಕ್ಕೆ ಪ್ರತಿಕ್ರಿಯಿಸಿದರು. ಸ್ಮಾರ್ಟ್ ಮೀಟರ್‌ಗಳನ್ನೇ ಬಿಟ್ಟಿಲ್ಲ, ಇನ್ನೂ ಕಸವನ್ನ ಬಿಡ್ತಾರಾ ಇವ್ರು? ಬರ್ತ್, ಡೆತ್ ಸರ್ಟಿಫಿಕೇಟ್, ನೋಂದಣಿ ಶುಲ್ಕ ಎಲ್ಲವನ್ನೂ ಏರಿಸಿದ್ದಾರೆ (Price Hike). ಇನ್ನೂ ಪೋಸ್ಟ್ ಮಾರ್ಟಂಗೂ ಧರ ವಿಧಿಸಬೇಕು ಅಷ್ಟೇ, ಇದಾದರೆ ಜನ ಸಾಯೋದಕ್ಕೂ ಹಿಂಜರೀತಾರೆ ಅಂತ ವ್ಯಂಗ್ಯವಾಡಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?
ಮಡಿಕೇರಿ ಬಿಜೆಪಿ ಕಾರ್ಯಕರ್ತ (BJP Worker) ಆತ್ಮಹತ್ಯೆ ಕೇಸ್ ಬಗ್ಗೆ ಮಾತನಾಡಿ, ಸಾಯಿಸಿ ರಾಜಕಾರಣ ಮಾಡೋದು ಕಾಂಗ್ರೆಸ್. ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಚಾರದಲ್ಲಿ, ರೋಹಿತ್ ವೇಮುಲ ವಿಚಾರದಲ್ಲಿ ಮಾಡಿದ ನಿಮ್ಮ ರಾಜಕಾರಣ, ಅಪಪ್ರಚಾರ ಯಾವ ಸೀಮೆಯದು? ಈಗಲೂ ವಿನಯ್ ಸಾವಿನಲ್ಲೂ ಅಪಪ್ರಚಾರ ಮಾಡ್ತಿದ್ದೀರಿ. ಸುಳ್ಳು ಆರೋಪ ಮಾಡಿ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ. ವಿನಯ್ ಸೋಮಯ್ಯ ಡೆತ್ ನೋಟ್ ಬರೆದಿದ್ದು ಸುಳ್ಳಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನದ್ದು ಆತ್ಮಹತ್ಯೆಯಲ್ಲ, ಕೊಲೆ: ವಿಜಯೇಂದ್ರ ಆರೋಪ
ಇದೇ ವೇಳೆ ಹೆಚ್ಡಿಕೆಯಿಂದ ಡಿಕೆಶಿ ವಿರುದ್ಧ ಕಬ್ಬಿಣದ ಅದಿರು ಸಾಗಣೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಬ್ರು ಕೇಂದ್ರ ಸಚಿವರು ಇನ್ನೊಬ್ಬರು ರಾಜ್ಯದ ಡಿಸಿಎಂ, ಆಪಾದನೆ ಬಂದವರು ಪರೀಕ್ಷೆಗೆ ಒಳಪಡಬೇಕು. ಆಪಾದನೆ ಮಾಡಿದವರು ರಾಜ್ಯದ ಕಾನೂನು ಕುಣಿಕೆಯಿಂದ ಅವ್ರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಡಿಕೆಶಿ ಅವ್ರು ನಮ್ಮ ರೈತರಿಗೆ ಆಲೂಗೆಡ್ಡಿಯಿಂದ ಚಿನ್ನ ಬೆಳೆಯೋದು ಹೇಗೆಂದು ಹೇಳಿ ಕೊಡಲಿ, ಎತ್ತಿನಗಾಡಿಯಿಂದ ಪ್ರೈವೇಟ್ ಜೆಟ್ ನಲ್ಲಿ ಹೋಗೋವರೆಗಿನ ಸೂತ್ರ ಏನು ಅಂತ ಡಿಕೆಶಿ ಕೊಡಲಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: New Zealand v/s Pakistan – ಕ್ರಿಕೆಟ್ ಪಂದ್ಯದ ವೇಳೆಯೇ ಗ್ರೌಂಡ್‌ನಲ್ಲಿ ಪವರ್‌ಕಟ್; ಮುಂದೇನಾಯ್ತು?