ಭುವನೇಶ್ವರ: ಒಡಿಶಾ ಮಾಜಿ ಸಿಎಂ, ಒಡಿಶಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ (Naveen Patnaik) ಆರೋಗ್ಯದಲ್ಲಿ (Health) ಏರುಪೇರು ಉಂಟಾಗಿದ್ದು, ಒಡಿಶಾದ (Odisha) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
78 ವರ್ಷದ ಪಟ್ನಾಯಕ್ ಶನಿವಾರ ರಾತ್ರಿ ಅಸ್ವಸ್ಥಗೊಂಡಿದ್ದರು. ಕೂಡಲೇ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಕುರಿತು ಆಸ್ಪತ್ರೆ ಶೀಘ್ರದಲ್ಲೇ ಬುಲೆಟಿನ್ ಬಿಡುಗಡೆ ಮಾಡಲಿದೆ ಎಂದು ಬಿಜೆಡಿ ಹಿರಿಯ ನಾಯಕ ನವೀನ್ ನಿವಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ NDA ಉಪರಾಷ್ಟ್ರಪತಿ ಅಭ್ಯರ್ಥಿ
ನವೀನ್ ಪಟ್ನಾಯಕ್ ಜೂನ್ 22ರಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜುಲೈ 7ರಂದು ಅವರನ್ನು ಮುಂಬೈ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಳಿಕ ಜುಲೈ 12ರಂದು ಒಡಿಶಾಗೆ ಮರಳಿದ್ದರು. ಇದನ್ನೂ ಓದಿ: ಸಾಲು ಸಾಲು ರಜೆ ಬಳಿಕ ಬೆಂಗಳೂರಿನತ್ತ ಜನ – ನೆಲಮಂಗಲ ಬೈಪಾಸ್ ಬಳಿ ಟ್ರಾಫಿಕ್ ಜಾಮ್