ಭುವನೇಶ್ವರ: ಬಿಜೆಪಿ ವಿರುದ್ಧ ಸೋಲಿನ ಬಳಿಕ ಇದೀಗ ನಿರ್ಗಮಿತ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ರಾಜೀನಾಮೆ ಸಲ್ಲಿಸಿದ್ದಾರೆ.
ಪಟ್ನಾಯಕ್ ಅವರು ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್ ದಾಸ್ (Governor Raghubar Das) ಅವರನ್ನು ಭೇಟಿ ಮಾಡಿದರು. ಬಳಿಕ ರಾಜ್ಯಪಾಲರಿಗೆ ತನ್ನ ರಾಜೀನಾಮೆ ಪತ್ರವನ್ನು ನೀಡಿದರು. ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್
ಜೂನ್ 4 (ನಿನ್ನೆ) ಒಡಿಶಾ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿತು. ನವೀನ್ ಪಟ್ನಾಯಕ್ ಅವರ ಬಿಜೆಡಿ 51 ಸ್ಥಾನಗಳನ್ನು ಗೆದ್ದು 24 ವರ್ಷಗಳ ನಂತರ ಅಧಿಕಾರವನ್ನು ಕಳೆದುಕೊಂಡಿತು. ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿ 71 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದೆ. ಒಡಿಶಾದಲ್ಲಿ 147 ವಿಧಾನಸಭಾ ಸ್ಥಾನಗಳಿದ್ದು, ಸರ್ಕಾರ ರಚನೆಗೆ ಬಹುಮತಕ್ಕೆ 74 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 112 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 23 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 9, ಸಿಪಿಐ (ಎಂ) ಒಂದು ಸ್ಥಾನದಲ್ಲಿ ಗೆಲುವು ಕಂಡಿತ್ತು.