ಭುವನೇಶ್ವರ: ಕಳಪೆ ಕಾಮಗಾರಿ ಮಾಡಿಸಿದ್ದಕ್ಕೆ ಲೋಕೋಪಯೋಗಿ ಕಿರಿಯ ಎಂಜಿನಿಯರ್ ಅವರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಯುವಂತೆ ಶಿಕ್ಷೆ ನೀಡಿದ್ದ ಬಿಜೆಡಿ ಶಾಸಕ ಸರೋಜ್ ಮೆಹೆರ್ ಅವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
16ನೇ ವಿಧಾನಸಭೆ ಅಧಿವೇಶನ ಪ್ರಾರಂಭವಾಗುವ ಮುನ್ನಾದಿನವೇ ಆಡಳಿತಾರೂಢ ಪಕ್ಷದ ಶಾಸಕರ ಬಂಧನವಾಗಿದೆ.
Advertisement
ಬಸ್ಕಿ ಹೊಡೆದ ಎಂಜಿನಿಯರ್ ಜಯಾಕಾಂತ್ ಸಬರ್ ಬುಡಕಟ್ಟು ಜನಾಂಗದವರಾಗಿದ್ದರೆ, ಸಚಿವ ಹಿಂದುಳಿದ ವರ್ಗದವರಾಗಿದ್ದಾರೆ. ಘಟನೆ ನಂತರ ಮೆಹೆರ್ ಅವರ ಬಂಧಿಸುವಂತೆ ಬುಡಕಟ್ಟು ಸಮುದಾಯದ ಜನ ಪ್ರತಿಭಟನೆ ನಡೆಸುತ್ತಿದ್ದರು. ಮೆಹೆರ್ ಅವರನ್ನು ಬಿಡುಗಡೆ ಮಾಡಿದಲ್ಲಿ ಜೂ.26ರಂದು ನಡೆಯುವ ಅಧಿವೇಶನಕ್ಕೆ ಘೇರಾವ್ ಹಾಕುವ ಎಚ್ಚರಿಕೆಯನ್ನು ನೀಡಿವೆ.
Advertisement
Advertisement
ಬುಡಕಟ್ಟು ಜನಾಂಗದವರು ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸಿದರೆ, ಓಬಿಸಿ ಸಮುದಾಯದವರು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿವೆ. ಹೀಗಾಗಿ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದೆ. ಶಾಸಕರ ಮೆಹೆರ್ ಅವರನ್ನು ಬಾಲಂಗಿರ್ ಜಿಲ್ಲೆಯ ಜೈಲಿನಲ್ಲಿಡಲಾಗಿದೆ.
Advertisement
ಘಟನೆ ಜೂ.5ರಂದು ನಡೆದಿದ್ದು, ಶಾಸಕ ಮೆಹೆರ್ ವಿರುದ್ಧ ಮರುದಿನ ಐಪಿಸಿ ಸೆಕ್ಷನ್ 341, 363, 294, 323, 353, 355 ಹಾಗೂ ಎಸ್‍ಸಿ-ಎಸ್‍ಟಿ ಕಾಯ್ದೆ ಪ್ರಕಾರ ಸೆಕ್ಷನ್ 3 (ದೌರ್ಜನ್ಯ ತಡೆಗಟ್ಟುವಿಕೆ) ಅಡಿ ಎಫ್‍ಐಆರ್ ದಾಖಲಿಸಲಾಗಿತ್ತು.