ಬ್ಯಾಂಕಾಕ್: ಬ್ರಿಟಿಷ್ ವ್ಯಕ್ತಿ ಮತ್ತು ಅವರ ಗೆಳತಿ ರಜೆ ಸಮಯ ಕಳೆಯಲು ಥೈಲ್ಯಾಂಡ್ ಪ್ರವಾಸಕ್ಕೆಂದು ಬಂದು ತಂಗಿದ್ದ ಹೋಟೆಲ್ ರೂಮ್‍ವೊಂದರಲ್ಲಿ ವಿಲಕ್ಷಣ ಘಟನೆಯೊಂದು ಸಂಭವಿಸಿದೆ. ಅವರ ಶೌಚಾಲಯದ ಕಮೋಡ್‍ನಿಂದ ಮಾನಿಟರ್ ಹಲ್ಲಿಯೊಂದು ಹೊರಬಂದಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಗೆಳತಿಯೊಂದಿಗೆ ಪಾಥುಮ್ ಥಾನಿಗೆ ಪ್ರವಾಸಕ್ಕೆಂದು ಬಂದಿದ್ದ. ವ್ಯಕ್ತಿ ಶೌಚಾಲಯದಲ್ಲಿ ಮಾನಿಟರ್ ಹಲ್ಲಿಯನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ. ಅದು ನಂತರ ಕಮೋಡ್‍ನಿಂದ ತಾನಾಗಿಯೇ ಕಣ್ಮರೆಯಾಗಿದೆ. ಇದನ್ನೂ ಓದಿ: ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ
Advertisement
Advertisement
ಈ ನೀರಿನ ಮಾನಿಟರ್ ಹಲ್ಲಿಗಳು ಥೈಲ್ಯಾಂಡ್‍ನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೊಳ ಮತ್ತು ಕಾಲುವೆಗಳಲ್ಲಿ ವಾಸಿಸುತ್ತವೆ. ಮಾನಿಟರ್ ಹಲ್ಲಿಗಳು ವಿಷಪೂರಿತ ಪ್ರಭೇದಗಳಾಗಿವೆ. ಇವು ಕಚ್ಚಿದಾಗ ಹಾನಿಕಾರಕ ಬ್ಯಾಕ್ಟೀರಿಯಾ ದೇಹದಲ್ಲಿ ವಿಷವಾಗಿ ಮಾರ್ಪಟ್ಟು ಸಮಸ್ಯೆಯಾಗುತ್ತದೆ. ದಂಪತಿಯು ಅದೃಷ್ಟವಶಾತ್ ಅದರ ಆಕ್ರಮಣದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ
Advertisement
ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಮಾನಿಟರ್ ಹಲ್ಲಿಯು ನೋಡಲು ಡೈನೊಸಾರ್ ಆಕಾರದಲ್ಲಿದ್ದು, ಕಪ್ಪು ಬಿಳಿಯ ಬಣ್ಣದ ಚರ್ಮವನ್ನು ಹೊಂದಿದೆ.