ಅಲ್ಬನಿ: ಇದುವರೆಗೂ ಕೇಳಿರದ ವಿಲಕ್ಷಣ ಘಟನೆಯೊಂದು ನ್ಯೂಯಾರ್ಕ್‍ನಲ್ಲಿ ನಡೆದಿದೆ. ಮಂಗಳವಾರ ವಿಚಾರಣೆ ನಡೆಯುತ್ತಿದ್ದ ವೇಳೆ ನೂರಾರು ಜಿರಳೆಗಳನ್ನು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಬಿಡುಗಡೆ ಮಾಡಲಾಗಿದೆ.
ಅಲ್ಬನಿ ಸಿಟಿ ಕೋರ್ಟ್‍ನಲ್ಲಿ ನಾಲ್ಕು ಜನ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕೋರ್ಟ್‍ನಲ್ಲಿ ವಾದಗಳು ಪ್ರಾರಂಭವಾಗಿ ವಾಗ್ವಾದಕ್ಕೆ ತಿರುಗಿಕೊಂಡಿತ್ತು. ಈ ವೇಳೆ ಕೋರ್ಟ್ ಒಳಗಡೆ ತಂದಿದ್ದ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ನೂರಾರು ಜಿರಳೆಗಳನ್ನು ಬಿಡಲಾಗಿದೆ. ನಂತರ ಈ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದ್ದು, ನಂತರ ನ್ಯಾಯಾಲಯದ ಅಧಿಕಾರಿಗಳು ತಡೆದಿದ್ದಾರೆ.
Advertisement
Advertisement
ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿದ್ದು, ಜಿರಳೆಗಳನ್ನು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಒಳಗೆ ಬಿಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಪ್ರಸ್ತುತ ನಾವು ಘಟನೆ ಬಗ್ಗೆ ಯಾವುದೇ ರೀತಿಯ ತೀರ್ಮಾನಕ್ಕೆ ಬರಲು ಅಥವಾ ಯಾವುದೇ ಆರೋಪಗಳನ್ನು ಮಾಡಲು ಬಯಸುವುದಿಲ್ಲ. ಆದರೆ ಜಿರಳೆಗಳನ್ನು ಪ್ರತಿಭಟನೆಯಾಗಿ ಬಳಸಲಾಗಿದೆ ಎಂದು ಕಾಣಿಸುತ್ತಿದೆ ಎಂದರು. ಇದನ್ನೂ ಓದಿ: ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ
Advertisement
Advertisement
ಸರ್ಕಾರಿ ಆಡಳಿತಕ್ಕೆ ಅಡ್ಡಿಪಡಿಸುವುದು ಮತ್ತು ಭೌತಿಕ ಸಾಕ್ಷ್ಯವನ್ನು ನಾಶ ಮಾಡಲು ಯತ್ನ ಮಾಡಿದಕ್ಕೆ ನ್ಯಾಯಾಲಯದ ಅಧಿಕಾರಿಗಳು 34 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.