ಮುಂಬೈ: ವಾರಕ್ಕೆ 70 ಗಂಟೆ ದುಡಿಬೇಕು ಎನ್ನುವ ಇನ್ಫೋಸಿಸ್ (Infosys) ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ (Narayana Murthy) ಅವರ ಹೇಳಿಕೆ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಈ ಹೊತ್ತಿನಲ್ಲೇ ದೇಶದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gautam Adani) ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Watch: Adani Group Chairman Gautam Adani on work-life balance says, “If you enjoy what you do, then you have a work-life balance. Your work-life balance should not be imposed on me, and my work-life balance shouldn’t be imposed on you. One must look that they atleast spend four… pic.twitter.com/Wu7Od0gz6p
— IANS (@ians_india) December 26, 2024
Advertisement
ʻಕೆಲಸ-ಜೀವನ ಸಮತೋಲʼ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ನಾವು ಇಷ್ಟಪಡುವ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನದಲ್ಲಿ ಸಮತೋಲನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
Advertisement
ನಿಮ್ಮ ಕೆಲಸ ಮತ್ತು ಜೀನವದ ಸಮತೋಲನವನ್ನು ನನ್ನ ಮೇಲೆ ಹೇರಬಾರದು, ಹಾಗೆಯೇ ನನ್ನ ಕೆಲಸ-ಜೀವನ ಸಮತೋಲನವನ್ನ ನಿಮ್ಮ ಮೇಲೆ ಹೇರಬಾರದು. ನಾನು ನನ್ನ ಕುಟುಂಬದೊಂದಿಗೆ ನಿತ್ಯ 4 ಗಂಟೆ ಕಳೆಯುತ್ತೇನೆ, ನನಗೆ ಅದರಲ್ಲಿ ಆನಂದ ಇದೆ. ಉಳಿದ ಸಮಯದಲ್ಲೂ 8 ಗಂಟೆಕಾಲ ಕೆಲಸ ಮಾಡ್ತಾ ಕುಳಿತರೇ ಹೆಂಡ್ತಿ ಓಡಿಹೋಗ್ತಾಳೆ ಅಂತ ಹಾಸ್ಯ ಚಟಾಕಿ ಹಾರಿಸಿದ್ದಾರೆ.
Advertisement
Advertisement
ಕೆಲದಿನಗಳ ಹಿಂದೆಯಷ್ಟೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು, ಭಾರತದ (India) ಕೆಲಸದ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ದೇಶವು ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಜನತೆ (Youngsters) ವಾರಕ್ಕೆ 70 ಗಂಟೆಗಳ ಕಾಲ ಕೆಲಸ (70-Hour Work Week) ಮಾಡಲು ಸಿದ್ಧರಾಗಿರಬೇಕು ಎಂದು ಹೇಳಿದ್ದರು.
ಎರಡನೇ ಮಹಾಯುದ್ಧದ ಬಳಿಕ ಜರ್ಮನಿ (Germany) ಹಾಗೂ ಜಪಾನ್ (Japan) ದೇಶ ಅಭಿವೃದ್ಧಿಯಾಗಿದ್ದನ್ನು ಉಲ್ಲೇಖಿಸಿದ್ದ ಅವರು, ಎರಡನೇ ಮಹಾಯುದ್ಧದ ಬಳಿಕ ಪ್ರತಿಯೊಬ್ಬ ಜರ್ಮನ್ ಪ್ರಜೆ ಕೆಲ ವರ್ಷಗಳವರೆಗೆ ಹೆಚ್ಚುವರಿ ಅವಧಿ ದುಡಿಯುತ್ತಿದ್ದರು. ಪಾಶ್ಚಿಮಾತ್ಯರಿಂದ ಅನಪೇಕ್ಷಿತ ಹವ್ಯಾಸಗಳನ್ನು ನಾವು ಕಲಿಯಬಾರದು. ಭಾರತ ನನ್ನ ದೇಶ, ಇದಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ದುಡಿಯುತ್ತೇನೆ ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎ೦ದು ಯುವಜನತೆಯಲ್ಲಿ ಮನವಿ ಮಾಡಿದ್ದರು.