ವಾಷಿಂಗ್ಟನ್: ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ (Netflix) 2023ರ ಆರಂಭದಿಂದ ಪಾಸ್‌ವರ್ಡ್ ಹಂಚಿಕೆ (Password Sharing) ಫೀಚರ್ ಅನ್ನು ಕೊನೆಗೊಳಿಸಲು ಯೋಜಿಸುತ್ತಿರುವುದಾಗಿ ವರದಿಯಾಗಿದೆ.
ಹೌದು, ಕಂಪನಿ ಈ ಹಿಂದೆ ಕಳೆದ ಹಲವು ತಿಂಗಳುಗಳಿಂದಲೇ ಪಾಸ್‌ವರ್ಡ್ ಹಂಚಿಕೆ ಫೀಚರ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಆಗಾಗ ಸುದ್ದಿಯಾಗುತ್ತಿತ್ತು. ಆದರೆ ಇದೀಗ ನೆಟ್‌ಫ್ಲಿಕ್ಸ್ ಕೊನೆಗೂ ಈ ಬದಲಾವಣೆಯನ್ನು ಅಧಿಕೃತವಾಗಿ ಮುಂದಿನ ವರ್ಷದಿಂದ ಜಾರಿಗೆ ತರಲು ಯೋಜಿಸಿರುವುದಾಗಿ ವರದಿಯಾಗಿದೆ.
Advertisement
Advertisement
ಪಾಸ್‌ವರ್ಡ್ ಹಂಚಿಕೆ ಫೀಚರ್ ಕಂಪನಿಯ ಗಳಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದಾಗಿ ನೆಟ್‌ಫ್ಲಿಕ್ಸ್ ಹಿಂದಿನಿಂದಲೂ ಹೇಳಿಕೊಂಡು ಬಂದಿತ್ತು. ಆದರೆ 2022ರಲ್ಲಿ ಚಂದಾದಾರರ ಹೆಚ್ಚಳದಿಂದಾಗಿ ಕಂಪನಿ ತನ್ನ ಸಮಸ್ಯೆ ತೋರಿಸಿಕೊಳ್ಳುವುದನ್ನು ಕಡಿಮೆ ಮಾಡಿತ್ತು.
Advertisement
ಈ ವರ್ಷ ನೆಟ್‌ಫ್ಲಿಕ್ಸ್ ಆದಾಯದ ಕುಸಿತ ಹಾಗೂ 10 ವರ್ಷಗಳಲ್ಲೇ ಮೊದಲ ಬಾರಿ ಚಂದಾದಾರರ ನಷ್ಟವನ್ನು ಎದುರಿಸಿದೆ. ಹೀಗಾಗಿ ಕಂಪನಿಯ ಸಿಇಒ ರೀಡ್ ಹೇಸ್ಟಿಂಗ್ಸ್ ಈ ಸಮಸ್ಯೆಗೆ ಇದೀಗ ಕ್ರಮ ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್ ಅಗತ್ಯವಿಲ್ಲ : IMA
Advertisement
ನೆಟ್‌ಫ್ಲಿಕ್ಸ್ ಬಳಕೆದಾರರು ತಮ್ಮ ಮನೆಯಿಂದ ಹೊರಗಿನವರಿಗೆ ಖಾತೆಯ ಪಾಸ್‌ವರ್ಡ್ ಹಂಚಿಕೊಂಡಿದ್ದಲ್ಲಿ, ಅವರಿಂದಲೂ ಪಾವತಿಯನ್ನು ಕೇಳಲು ಯೋಜಿಸಿದೆ. ಇದು ಮುಂದಿನ ವರ್ಷ ಆರಂಭದಿಂದಲೇ ಜಾರಿಗೆ ಬರಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್ & ಕ್ಯಾರಿ ಶಾಪಿಂಗ್
ಈ ವರ್ಷ ಅಕ್ಟೋಬರ್‌ನಲ್ಲಿ ನೆಟ್‌ಫ್ಲಿಕ್ಸ್ ತನ್ನ ಎಲ್ಲಾ ಜಾಗತಿಕವಾಗಿ ಬಳಕೆದಾರರಿಗೆ ಪಾಸ್‌ವರ್ಡ್ ಹಂಚಿಕೆಯನ್ನು ತಡೆಯಲು ‘ಪ್ರೊಫೈಲ್ ಟ್ರಾನ್ಸ್‌ಫರ್’ ಫೀಚರ್ ಅನ್ನು ಘೋಷಿಸಿದೆ.