ಕಹಿಯಾದ ಹಾಗಲಕಾಯಿಯಲ್ಲಿದೆ ಹಲವು ಆರೋಗ್ಯಕರ ಅಂಶ

Public TV
1 Min Read
Bitter Gourd 3

ಹಾಗಲಕಾಯಿ ಎಂದರೆ ಹಲವರು ಮೂಗು ಮುರಿಯುತ್ತಾರೆ. ಈ ಕಹಿಯಾದ ಹಾಗಲಕಾಯಿಂದ ಹಲವಾರು ಆರೋಗ್ಯಕರ ಅಂಶಗಳು ಸಿಗಲಿದೆ. ಕೆಲವರು ಹಾಗಲಕಾಯಿ ಅಂದ್ರೆ ಸಾಕು ಕಹಿ ಇರುವ ಕಾರಣ ಇಷ್ಟಪಡುವುದಿಲ್ಲ. ದೇಹಕ್ಕೆ ಖಾರ, ಉಪ್ಪು, ಹುಳಿಯ ಅಂಶ ಹೇಗೆ ಹಿತಮಿತವಾಗಿ ಬೇಕೋ ಅದೇ ರೀತಿ ಕಹಿ ಅಂಶ ಕೂಡಾ ಮುಖ್ಯ.

Bitter Gourd 2

ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್‍ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆ ಮಾಗಲು ಸಹಾಯ ಮಾಡುತ್ತದೆ. ಹಾಗಲಕಾಯಿಯ ಪ್ರಮುಖ ಆರು ಆರೋಗ್ಯಕಾರಿ ಗುಣಗಳೇನು ಎಂಬ ವಿವರ ಇಲ್ಲಿದೆ ನೋಡಿ.

* ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ವೈರಸ್ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಕೊಂಚ ಕಹಿ ಎನಿಸಿದರೂ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

Bitter Gourd 1

* ಹಾಗಲಕಾಯಿಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

* ಇದರಲ್ಲಿರುವ ಫೈಟೋನ್ಯೂಟ್ರಿಯೆಂಟುಗಳು ಮತ್ತು ವಿವಿಧ ಪೋಷಕಾಂಶಗಳು ದೇಹದ ಕೊಬ್ಬನ್ನು ಬಹಳವಾಗಿ ಬಳಸುವುದರಿಂದ ತೂಕ ಕಡಿಮೆಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತರಾಗಿರುವವರಿಗೆ ಸೂಕ್ತವಾದ ಆಹಾರವಾಗಿದೆ.

Bitter Gourd 

* ವಿಟಮಿನ್ ಎ ಅಂಶದ ಉತ್ತಮ ಮೂಲವಾಗಿದೆ. ನಿಮ್ಮ ಕಣ್ಣಿನ ಆರೋಗ್ಯ ಮತ್ತು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

* ಮದ್ಯದ ಅಥವಾ ಇತರ ಔಷಧಿಗಳ ಅಡ್ಡಪರಿಣಾಮದಿಂದಾಗಿ ಬಹುಕಾಲ ಅಮಲು ಇಳಿಯದೇ ಇದ್ದರೆ ಒಂದು ಲೋಟ ಹಾಗಲಕಾಯಿಯ ಜ್ಯೂಸ್ ಕುಡಿಯುವುದರಿಂದ ಅಮಲು ಕೂಡಲೇ ಇಳಿದು ಸ್ವಸ್ಥತೆಯನ್ನು ಅನುಭವಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *