ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

Public TV
3 Min Read
Shri Krishna alias Shriki 1

ಬೆಂಗಳೂರು: ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣನ ವ್ಯಾಲೆಟ್‌ನಿಂದ ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ ಮತ್ತು ನಾಪತ್ತೆಯಾಗಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಬಿಟ್‌ ಕಾಯಿನ್‌ ಹಗರಣ ಜೋರಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸರು ಈ ಸಂಬಂಧ ಸುದೀರ್ಘ ವಿವರಗಳಿರುವ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.

Bitcoin Scam Shri Krishna alias Shriki 3

ಹೇಳಿಕೆಯಲ್ಲಿ ಏನಿದೆ?
ಸಿಸಿಬಿ ನಿಷ್ಪಕ್ಷತವಾಗಿ ತನಿಖೆ ಮಾಡಿದ್ದು, ಸಿಸಿಬಿ ತನಿಖೆಯ ತಿರುಚಿದ ವರದಿಗಳು ಬಹಿರಂಗವಾಗುತ್ತಿದೆ. 2020ರ ಏಪ್ರಿಲ್‌ 11 ರಂದು ಡಾರ್ಕ್‌ನೆಟ್‌ ಮೂಲಕ ಸಂಗ್ರಹಿಸಲಾದ ಮಾಹಿತಿ ಪ್ರಕಾರ ಒಬ್ಬನನ್ನು ವಶಕ್ಕೆ ಪಡೆಯಲಾಗುತ್ತದೆ.

ಆರೋಪಿಯಿಂದ 500 ಗ್ರಾಂ ಗಾಂಜಾ ವಶಕ್ಕೆ ಪಡೆದ ಬಳಿಕ ನಾರ್ಕೋಟಿಕ್ಸ್ ಡ್ರಗ್ಸ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್‌) ಕಾಯ್ದೆ ಅಡಿ ಕೆ.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ನಂತರ ಹೆಚ್ಚಿನ ತನಿಖೆಯ ವೇಳೆ ಶ್ರೀಕಿ ಸೇರಿದಂತೆ 10 ಜನರ ಬಂಧನ ಮಾಡಲಾಯಿತು. ವಿಚಾರಣೆ ಸಂಬಂಧ ಕ್ರಿಪ್ಟೋ ಕರೆನ್ಸಿ ವೆಬ್ ಸೈಟ್ ಗಳನ್ನ ಹ್ಯಾಕ್ ಮಾಡಿದ್ದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿರುತ್ತಾರೆ. ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಲಾಗುತ್ತದೆ. ಇದನ್ನೂ ಓದಿ: ಬಾರ್ ವಿರುದ್ಧ ರೊಚ್ಚಿಗೆದ್ದ ಮಹಿಳಾ ಮಣಿಗಳು – ಕುರ್ಚಿಗಳು ಪೀಸ್ ಪೀಸ್

Bitcoin Scam Shri Krishna alias Shriki 4

ಶ್ರೀಕಿ ವ್ಯಾಲೆಟ್‌ನಿಂದ ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ ಮತ್ತು ನಾಪತ್ತೆಯಾಗಿಲ್ಲ. ಕಿಪ್ಟೋ ಕರೆನ್ಸಿಯ ತನಿಖೆಯ ಉದ್ದೇಶಕ್ಕಾಗಿ ಖಾತೆ ತೆರೆಯುವ ಅಗತ್ಯ ಇದ್ದ ಕಾರಣ ಸರ್ಕಾರದ ಅನುಮತಿ ಪಡೆದು ಖಾತೆಯನ್ನು ತೆರಯಲಾಗಿತ್ತು. ಬಿಟ್ ಕಾಯಿನ್ ಗುರುತಿಸುವ ವಶಪಡಿಸಿಕೊಳ್ಳುವ ಪಕ್ರಿಯೆ ಸಂದರ್ಭದಲ್ಲಿ ಶ್ರೀಕಿ ಬಿಟ್ ಕಾಯಿನ್ ವ್ಯಾಲೆಟ್ ತೋರಿಸಿದ್ದು ಅದರಲ್ಲಿ 31.8 ಬಿಟ್ ಕಾಯಿನ್ ಇದ್ದವು. ಸೈಬರ್ ತಜ್ಞರು ಹಾಗೂ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನನ್ನ ಕುಟುಂಬಕ್ಕೆ ಭದ್ರತೆ ಕೊಡಿ ಎಂದು ಮೋದಿಗೆ ಮನವಿ ಸಲ್ಲಿಸಿದ ಪಾಕ್ ಕ್ರಿಕೆಟಿಗನ ಪತ್ನಿ

ಬಿಟ್ ಕಾಯಿನ್ ಗಳನ್ನು ಪೊಲೀಸ್ ಖಾತೆಗೆ ವರ್ಗ ಮಾಡಿಕೊಳ್ಳಲು ನ್ಯಾಯಾಲಯದ ಅನುಮತಿ ಪಡೆದುಕೊಳ್ಳಲಾಗಿದೆ. ಶ್ರೀಕಿಯ ತನ್ನಲ್ಲಿದ್ದ ಎಲ್ಲ ವ್ಯಾಲೆಟ್‌ ತೋರಿಸಿದಾಗ 186.811 ಬಿಟ್ ಕಾಯಿನ್ ಪತ್ತೆ ಆಗಿದೆ. ವಿಚಾರಣೆ ವೇಳೆಯಲ್ಲಿ ಆರೋಪಿ ಇದು ನನ್ನ ವೈಯಕ್ತಿಕ ಖಾತೆ ಎಂದು ತಪ್ಪೊಪ್ಪಿಕೊಂಡಿದ್ದ. ಶ್ರೀಕಿ ಬಳಿ ಖಾಸಗಿ ಪಾಸ್‍ವರ್ಡ್ ಇರಲಿಲ್ಲ ಎಂದು ಸೈಬರ್ ತಜ್ಞರ ಸ್ಪಷ್ಟನೆ ನೀಡಿದ್ದು ಎಲ್ಲಾ ದಾಖಲೆಗಳನ್ನು ರೆಕಾರ್ಡ್‌ ಮಾಡಲಾಗಿದೆ. ನುರಿತ ಅಧಿಕಾರಿಗಳಿಂದ ತನಿಖೆ ಮಾಡಲಾಗಿದ್ದು, ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಮಾಹಿತಿಯನ್ನು ಸಿಬಿಐ, ಇಡಿಗೆ ಕಳಿಸಿಕೊಡಲಾಗಿದೆ. ವಿಚಾರಣೆ ಸಮಯದಲ್ಲಿ ಹಲವು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿರುವುದಾಗಿ ಶ್ರೀಕಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಹೆಚ್ಚಿನ ತನಿಖೆಗೆಗಾಗಿ ಮಾಹಿತಿಯನ್ನು ಇಂಟರ್‌ಪೋಲ್‌ಗೆ ನೀಡಲಾಗಿದೆ.

Bitcoin Scam Shri Krishna alias Shriki 2

ಶ್ರೀಕಿಗೆ ಪೊಲೀಸ್ ಕಸ್ಟಡಿಯಲ್ಲಿ ಡ್ರಗ್ಸ್ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ತನಿಖಾಧಿಕಾರಿ ಅಲ್ಲಗೆಳೆದಿದ್ದರು. ಆದರೆ ನ್ಯಾಯಾಲಯ ಮೆಡಿಕಲ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿತ್ತು. ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಯಾಗಿದ್ದರಿಂದ ಅಲ್ಲಿ ಪರೀಕ್ಷೆ ಮಾಡಲು ಆಗಿರಲಿಲ್ಲ. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‍ಎಸ್‍ಎಲ್‍) ಕಳುಹಿಸಲಾಗಿತ್ತು. ಎಫ್‍ಎಸ್‍ಎಲ್ ಡ್ರಗ್ಸ್‌ ಸೇವಿಸಿಲ್ಲ ಎಂದು ನೆಗೆಟಿವ್ ರಿಪೋರ್ಟ್ ನೀಡಿತ್ತು. ಅಲ್ಲದೇ ಹೆಬಿಯಸ್ ಕಾರ್ಪಸ್ ಹಾಕಿದ್ದವರ ಮೇಲೂ ನ್ಯಾಯಾಲಯ 5 ಸಾವಿರ ರೂ. ದಂಡ ವಿಧಿಸಿದೆ. ಸದ್ಯಕ್ಕೆ ಮೂರು ಕೇಸ್ ಗಳ ವಿಚಾರಣೆ ನಡೆದಿದ್ದು ಎಲ್ಲಾ ಕೇಸ್ ಗಳು ಪಾರದರ್ಶಕವಾಗಿದೆ. ಶ್ರೀಕಿ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ಪ್ರಕರಣಗಳನ್ನು ಪಾರದರ್ಶಕವಾಗಿ ತನಿಖೆ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *